ಬೆಂಗಳೂರು: ಬೆಳಗಾವಿಯಲ್ಲಿ ಪದೇ ಪದೇ ಕಾಲು ಕೆರೆದುಕೊಂಡು ತಗಾದೆ ತೆಗೆಯುತ್ತಿರುವ ಮರಾಠಿ ಸಂಘಟನೆಗಳ ವಿರುದ್ಧ ಕನ್ನಡ ಪರ ಸಂಘಟನೆಗಳ ಮಾರ್ಚ್ 22ರಂದು ಬಂದ್ ಗೆ ಕರೆ ನೀಡಿವೆ. ಆದರೆ ಈ ಬಂದ್ ಗೆ ತುಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದ್ದು, ನಾವು ಯಾವುದೇ ಕಾರಣಕ್ಕೂ ತುಳುನಾಡನ್ನು ಬಂದ್ ಮಾಡುವುದಿಲ್ಲ ಎಂದು ಜಾಲತಾಣಗಳಲ್ಲಿ ಅಭಿಪ್ರಾಯಿಸಿದ್ದಾರೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬಂದ್ ಬೆಂಬಲಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡಿದ್ದು, ತುಳುನಾಡಿನ ಜನರು ಇದನ್ನು ತಿರಸ್ಕರಿಸಿದ್ದಾರೆ. ಬೇಕಾದರೆ ವಾಟಾಳ್ ನಾಗರಾಜ್ ಹಾಗೂ ಅವರನ್ನು ಬೆಂಬಲಿಸುವ ಹೋರಾಟಗಾರರು ಬಂದ್ ಮಾಡಲಿ, ಇಡೀ ರಾಜ್ಯವನ್ನು ಬಂದ್ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ, ಮರಾಠಿಗರು ಕನ್ಮೇನಡಿಗರ ಲೆ ದೌರ್ಜನ್ಯ ನಡೆಸಿದ್ದರೆ ಅದಕ್ಕೆ ಕಾನೂನು ಮಾರ್ಗಗಳಿವೆ, ಆ ಪ್ರಕಾರವೇ ಹೋರಾಟ ನಡೆಸಬೇಕು, ಬಡವರಿಗೆ, ಆಸ್ಪತ್ರೆಗೆ ಹೋಗುವವರಿಗೆ, ಶಾಲಾ-ಕಾಲೇಜ್ ಮಕ್ಕಳಿಗೆ ಇದರಿಂದ ತೊಂದರೆಯಾಗುತ್ತದೆ ಹಾಗಾಗಿ ರಾಜ್ಯವನ್ನು ಬಂದ್ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳನ್ನು ತುಳುವರು ಹಂಚಿಕೊಂಡಿದ್ದಾರೆ. ಹಾಗಾಗಿ ಮಾರ್ಚ್ 22ರಂದು ತುಳುನಾಡ್ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕಾರವಾರದಲ್ಲಿ ಬಂದ್ ಬೆಂಬಲ ಸಿಗಲು ಸಾಧ್ಯವಿಲ್ಲ ಎನ್ನಲಾಗಿದೆ.