“ಮಿಡ್ಲ್ ಕ್ಲಾಸ್”ಗೆ ಪ್ರೇಕ್ಷಕನ “ಶಹಾಬ್ಬಾಸ್”!

©️ಶಶಿ ಬೆಳ್ಳಾಯರು, ಪತ್ರಕರ್ತ
🔰2025ರ ಮೊದಲ ತುಳು ಸಿನಿಮಾ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿದ್ದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ”ಗೆ ಪ್ರೇಕ್ಷಕ “ಶಹಾಬ್ಬಾಸ್” ನೀಡಿದ್ದಾನೆ! ಹೌದು ತುಳು ಚಿತ್ರರಂಗದಲ್ಲಿ ಹೊಸ ಹೊಸ ಪ್ರಯತ್ನಗಳು ನಡಿತಾ ಇರುವಾಗ ಫ್ಯಾಮಿಲಿ ಒರಿಯೆಂಟೆಡ್ ಕಥೆ ಹೇಳುವ ಮೂಲಕ ನಿರ್ದೇಶಕ ರಾಹುಲ್ ಅಮೀನ್ ಮಿಡ್ಲ್ ಕ್ಲಾಸ್ ನಿಂದ ಹಿಡಿದು ಹೈ ಕ್ಲಾಸ್ ವರೆಗಿನ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ರಾಜ್ ಸೌಂಡ್ಸ್… ತಂಡವೇ ಇದ್ರಲ್ಲೂ ದುಡಿದಿರುವ ಕಾರಣ ತುಳುವರಿಗೆ ಅದ್ರಷ್ಟೇ ನಿರೀಕ್ಷೆ ಇತ್ತು ಅದನ್ನು ಹುಸಿಗೊಳಿಸದೇ ಸೀದಾ ಸಾದಾ ಫ್ಯಾಮಿಲಿ ಕಥೆ ಹೇಳಿರುವ ನಿರ್ದೇಶಕರು ಗೆದ್ದಿದ್ದಾರೆ.
ಚಿತ್ರದಲ್ಲಿ ನವೀನ್ ಡಿ ಪಡೀಲ್ ಹಾಸ್ಯ ಬಿಟ್ಟು ಗಾಂಭೀರ್ಯತೆ ಪ್ರದರ್ಶಿಸಿದ್ದು ಪ್ಲಸ್ ಪಾಯಿಂಟ್. ರೂಪಾ ವರ್ಕಾಡಿ ನಟನೆ ಸಹಜವಾಗಿದ್ದು ಇಷ್ಟವಾಗುತ್ತೆ. ಮೈಕ್ ಹಿಡಿದು ನಿರೂಪಣೆ ಮಾಡ್ತಾ ಇದ್ದ ಕದ್ರಿ ನವನೀತ್ ಶೆಟ್ಟಿ ಚೆನ್ನಾಗಿ ನಟಿಸಿದ್ದಾರೆ. ಅರವಿಂದ್ ಬೋಳಾರ್ ಹಾಸ್ಯ ಸಖತ್ತಾಗಿದೆ. ನಾಯಕ ನಟ ವಿನೀತ್, ನಟಿ ಸಮತಾ ಅಮೀನ್ ಇಬ್ಬರದೂ ಒಳ್ಳೇ ಪರ್ಫೆಕ್ಟ್ ಜೋಡಿ. ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನುವುದೇ ತಿಳಿಯದಷ್ಟು ಭಾವಪೂರ್ಣ ಅಭಿನಯ ನೀಡಿದ್ದಾರೆ. ರವಿ ರಾಮಕುಂಜ, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ, ಪ್ರಸನ್ನ ಬೈಲೂರು ನಗಿಸುವುದರಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ರಾಹುಲ್ ಅಮೀನ್, ಚೈತ್ರಾ ಶೆಟ್ಟಿ, ಶಾಹಿಲ್ ರೈ, ಭೋಜರಾಜ್ ವಾಮಂಜೂರ್, ಶರಣ್ ಚಿಲಿಂಬಿ ಪಾತ್ರಗಳನ್ನು ಪ್ರೇಕ್ಷಕ ನೆನಪಿಟ್ಟುಕೊಳ್ಳುತ್ತಾನೆ.
ಸಿನಿಮಾದಲ್ಲಿ ಎರಡು ಹಾಡುಗಳು ಗುನುಗುನಿಸುಂತಿವೆ. ಓವರ್ ಆಗಿ ನಿರೀಕ್ಷೆ ಇಟ್ಟುಕೊಂಡು ಥಿಯೇಟರ್ ಒಳಗಡೆ ಹೋಗದೆ ಇದು ನಮ್ಮದೇ ಮಿಡ್ಲ್ ಕ್ಲಾಸ್ ಕಥೆ ಅನ್ಕೊಂಡು ಹೋದ್ರೆ ಖಂಡಿತಾ ನೂರಕ್ಕೆ ನೂರು ಮನೋರಂಜನೆ ಸಿಗಲಿದೆ, ಯಾಕೆ ಅಂದ್ರೆ ಇದು ಹಾಸ್ಯದಷ್ಟೇ ಮಿಡ್ಲ್ ಕ್ಲಾಸ್ ಜನರ ಭಾವನೆ ಮತ್ತು ಬದುಕಿಗೂ ಪ್ರಾಧಾನ್ಯತೆ ನೀಡಿದ ಸಿನಿಮಾ. ಹೀಗಾಗಿ ವೀಕೆಂಡ್ ನಲ್ಲಿ ಮಿಸ್ ಮಾಡ್ದೆ ಹತ್ತಿರದ ಥಿಯೇಟರ್ ಹೋಗಿ ಸಿನಿಮಾ ನೋಡಿ. ಹೋಗುವಾಗ ನಿಮ್ಮ ಮಿಡ್ಲ್ ಕ್ಲಾಸ್ ಫ್ಯಾಮಿಲಿ, ಸ್ನೇಹಿತರ ಫ್ಯಾಮಿಲಿಗೂ ಹೇಳಿ ಕರ್ಕೊಂಡು ಹೋಗಿ.
error: Content is protected !!