“ನಾರಾಯಣ ಗುರುಗಳು ಒಂದು ಸಮಾಜದ ಆಸ್ತಿಯಲ್ಲ, ಇಡೀ ಹಿಂದೂ ಸಮಾಜದ ಆಸ್ತಿ!“ -ಡಾ.ಭರತ್ ಶೆಟ್ಟಿ ವೈ.

ಬಿಲ್ಲವ ಹಾಗೂ 26 ಪಂಗಡಗಳ ವಿಶ್ವ ಸಮ್ಮೇಳನ ಸಮಾರೋಪ: ಸುವರ್ಣ ಸಿರಿ ಪ್ರಶಸ್ತಿ ಪ್ರದಾನ.

ಸುರತ್ಕಲ್: ದ.ಕ.ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇದರ ಸುವರ್ಣಮಹೋತ್ಸವದ ಸವಿನೆನಪಿನ ವಿಶ್ವಸಮ್ಮೇಳನ ರವಿವಾರ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಶಾಸಕ ಭರತ್ ಶೆಟ್ಟಿ ವೈ. ಅವರು, ನಾರಾಯಣ ಗುರುಗಳು ಒಂದು ಸಮಾಜದ ಆಸ್ತಿಯಲ್ಲ, ಇಡೀ ಹಿಂದೂ ಸಮಾಜದ ಆಸ್ತಿ ಎಂದು ಹೇಳಿದರು.

ಇದೇ ಸಂದರ್ಭ ಮಾಜಿ ಚಿವ ಕೃಷ್ಣ ಜೆ. ಪಾಲೆಮಾರ್, ಉದ್ಯಮಿ ಧನಂಜಯ ಶೆಟ್ಟಿ ಅವರಿಗೆ ಸುವರ್ಣ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಧ್ಯಕ್ಷತೆಯನ್ನು ವಿಶ್ವ ಸಮ್ಮೇಳನದ ಗೌರವಾಧ್ಯಕ್ಷರು ಚಂದಯ್ಯ ಬಿ. ಕರ್ಕೇರ ವಹಿಸಿದ್ದರು.

ಸಮಾರಂಭದಲ್ಲಿ ಅಖಿಲ ಭಾರತ ಬಿಲ್ಲವ ಮಹಿಳಾ ಮಂಡಲದ ಅಧ್ಯಕ್ಷೆ ಸುಮಲತಾ ಎನ್ ಸುವರ್ಣ, ಉದ್ಯಮಿ ಸೂರಜ್ ಸೋನಿ ಕುಮಟಾ, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ, ಕುಳಾಯಿ ಫೌಂಡೇಶನ್ ನ ಪ್ರತಿಭಾ ಕುಳಾಯಿ, ಶಿವಮೊಗ್ಗ ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ
ಗೀತಾಂಜಲಿ , ಕಾರ್ಪೊರೇಟರ್ ಶ್ವೇತಾ,
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಭರತ್ ರಾಜ್ ಕೃಷ್ಣಾಪುರ, ಪುಷ್ಪರಾಜ್, ವಿಜಯ ಕುಮಾರ್ ಸೊರಕೆ,
ಶೋಭಾ ರಾಜೇಶ್, ಕೊಲ್ಯ ಬಿಲ್ಲವ ಸಮಾಜ ಸೇವಾ ಟ್ರಸ್ಟ್, ಸೋಮೇಶ್ವರ ಅಧ್ಯಕ್ಷರು ವೇಣುಗೋಪಾಲ್, ಬೆಸ್ಟ್ ಫೌಂಡೇಶನ್ ನ ರಕ್ಷಿತ್ ಶಿವರಾಮ್, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಇದರ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್., ರಮೇಶ್ ಕುಮಾರ್ ಚೇಳಾಯರು, ಸರೋಜಿನಿ ಶಾಂತರಾಜ್ ಮೊದಲಾದವರು ಉಪಸ್ಥಿತರಿದ್ದರು.

ನರೇಶ್ ಕುಮಾರ್ ಸಸಿಹಿತ್ಲು ಸ್ವಾಗತಿಸಿದರು. ಎಸ್ .ಆರ್. ಪ್ರಭಾತ್ ಧನ್ಯವಾದ ಸಮರ್ಪಿಸಿದರು. ಶರತ್ ಅಡ್ವೆ , ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.

error: Content is protected !!