ಮಂಗಳೂರು ; ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ, ಭಾನುವಾರ ಜನವರಿ 19ರಂದು ಬೆಳಗೆರಿಂದ ಮಧ್ಯಾಹ್ನ 3ರ ತನಕ 18 ವರ್ಷದ ಒಳಗಿನ ಮಕ್ಕಳಿಗಾಗಿ ಹುದೊಗ ಚಿಕಿತ್ಸಾ ಶಿಬಿರ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಸೇವಾ ಶಿಬಿರ ಜರುಗಲಿರುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಶ್ವದ ಶ್ರೇಷ್ಠ ಆಸ್ಪತ್ರೆಗಳಲ್ಲೊಂದಾದ ಹಾಗೂ ಅಮ್ಮ “ಸದ್ಗುರು ಶ್ರೀ ಮಾತಾ ಅಮ್ಮತಾನಂದಮಯಿ ದೇವಿಯವರ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ನಡೆಸಲ್ಪಡುವ ಕೊಚ್ಚಿಯ ಪ್ರಖ್ಯಾತ ಆಸ್ಪತ್ರೆ ‘ಅಮ್ಮತಾ ಆಸ್ಪತ್ರೆ- ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆಧುನಿಕ ಉಪಕರಣಗಳ ಸಹಿತ ಖ್ಯಾತ ತಜ್ಞ ವೈದ್ಯರುಗಳ ಸೇವೆ ಲಭ್ಯವಿದೆ ಅಮ್ಮನವರು ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಹಾಸನ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿರುವ 18 ವರ್ಷದ ಒಳಗಿನ ಮಕ್ಕಳು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರೆ ಅಂತಹ ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೀಡುವ ಕೊಡುಗೆಯನ್ನು ಅಮ್ಮನವರು ನೀಡಿರುತ್ತಾರೆ.ಈ ಕಾರ್ಯಕ್ರಮಕ್ಕೆ, ಕರ್ನಾಟಕದಾದ್ಯಂತ ಹೆಚ್ಚಿನ ಜನರು ಭಾಗವಹಿಸುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.
ಕೇರಳದ ಕೊಚ್ಚಿಯ ಅಮೃತಾ ಆಸ್ಪತ್ರೆಯ ಮಕ್ಕಳ ಹೃದಯರೋಗ ತಜ್ಞರಿಂದ ತಪಾಸಣೆ, ಚಿಕಿತ್ಸೆ ನಡೆಯಲಿದೆ ಹಾಗೂ
ಈ ಶಿಬಿರದಲ್ಲಿ ಕೊಚ್ಚಿಯ ಅಮೃತಾ ಆಸ್ಪತ್ರೆಯ ಮಕ್ಕಳ ಹೃದಯ ರೋಗ ತಜ್ಞ ವೈದ್ಯರುಗಳು ಅಗತ್ಯ ತಪಾಸಣಾ ಸಾಧನಗಳೊಂದಿಗೆ ಮಂಗಳೂರಿಗೆ ಆಗಮಿಸಲಿದ್ದು ಸೂಕ್ತ ತಪಾಸಣೆ ನಡೆಸಲಿರುವರು.ಶಸ್ತ್ರ ಚಿಕಿತ್ಸೆ ಸಹಿತ ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿರುವವರನ್ನು ಗುರುತಿಸಿ ಅವರಿಗೆ ಉಚಿತವಾಗಿ ಕೇರಳದ ಕೊಚ್ಚಿಯಲ್ಲಿನ ಅಮೃತಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಉಚಿತವಾಗಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಅಸಹಾಯಕರಿಗೆ ಇದು ವರದಾನ ವಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ನಿರ್ಧಾರ ಮಾಡಿ ಜನ ಜಾಗೃತಿ ಮೂಡಿಸಿದ ಪರಿಣಾಮವಾಗಿ ಈಗಾಗಲೇ ರಾಜ್ಯದಾದ್ಯಂತ ಅರ್ಹ ಫಲಾನುಭವಿಗಳು ಕರೆಮಾಡಿ ಈ ಉಚಿತ ಶಿಬಿರದಲ್ಲಿ ಭಾಗವಹಿಸುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಇವರಲ್ಲದೆ ಹೊರ ರಾಜ್ಯಗಳಿಂದಲೂ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ.
ಮಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಯವರಿಗೆಂದು ಸೀಮಿತಗೊಳಿಸಿದ್ದರೂ ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶಗಳ ಸಾರ್ವಜನಿಕರ ಬೇಡಿಕೆಯನ್ನು ಮನ್ನಿಸಿ ಈ ಉಚಿತ ಸೇವೆಯ ವ್ಯಾಪ್ತಿಯನ್ನು ರಾಜ್ಯದ ಪ್ರತಿ ಜಿಲ್ಲೆಗಳ ಜನರು ಪ್ರಯೋಜನ ಪಡೆಯಲು ಅನುಕೂಲವಾಗುವಂತೆ ವಿಸ್ತರಿಸಲಾಗಿದೆ.
ಮಂಗಳೂರಿನ ಮಾತಾ ಅಮೃತಾನಂದಮಯಿ ಮಠವು ಕಳೆದ 25 ವರ್ಷಗಳ ಕಾಲ ಹಳ್ಳಿ ಹಳ್ಳಿಗಳ ಕುಗ್ರಾಮಗಳಿಗೆ ಮತ್ತು ನಗರದ ಹಿಂದುಳಿದ ಪ್ರದೇಶಗಳಿಗೆ ತಜ್ಞ ವೈದ್ಯರು ಹಾಗೂ ಅಗತ್ಯ ಉತ್ತಮ ದರ್ಜೆಯ ಔಷಧಗಳೊಂದಿಗೆ ತೆರಳಿ ಹೆಚ್ಚಿನ ಪ್ರಚಾರವಿಲ್ಲ ಸರಳವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಇಲ್ಲಿನ ಈ ಉಚಿತ ವೈದ್ಯಕೀಯ ಸೇವೆಗಳ ಯಶಸ್ಸಿಗೆ ಅಮ್ಮನವರು ಈ ವಿಶೇಷ ಕೊಡುಗೆಯನ್ನು ನೀಡಿರುತ್ತಾರೆ ಎಂದು ಭಾವಿಸುತ್ತಿದ್ದೇವ
ಸುಮಾರು 2 ರಿಂದ 5 ಲಕ್ಷ ಖರ್ಚು ಬರಬಹುದೆಂಬ ಕಾರಣದಿಂದ ಚಿಕಿತ್ಸೆ ಪಡೆಯದೆ ಸಂಕಷ್ಟದಲ್ಲಿ ಇರುವ ರೋಗಿಗಳಿಗೆ ಈ ಕೊಡುಗೆ ಬಹಳ ಮಹತ್ವದ್ದಾಗಿದೆ.ಅಂತಹವರಿಗೆ ನೆರವಾಗಲೆಂದೇ ಅಮ್ಮನವರು ತಮ್ಮ ಆಸ್ಪತ್ರೆಯಲ್ಲಿರುವ ಅತ್ಯುನ್ನತ ಚಿಕಿತ್ಸಾ ಸೇವೆಯ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸುತ್ತಿದ್ದಾರೆ.
ಅದಕ್ಕಾಗಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರಿಗೆ ಕರಾವಳಿ ಕರ್ನಾಟಕದ ಸೇವಾ ಸಮಿತಿಗಳ ವತಿಯಿಂದ ಭಕ್ತಿ ಪೂರ್ವಕ ಕೃತಜ್ಞತೆ ಅರ್ಪಿಸುತ್ತಿದ್ದೇವೆ.
ಉಚಿತ ಸಾರಿಗೆ ವ್ಯವಸ್ಥೆ:
ಪಾಜ್ಯದಾದ್ಯಂತ ವಿವಿಧ ಜಿಲ್ಲೆಗಳಿಂದ ಆಗಮಿಸುವ ರೋಗಿಗಳು ಹಾಗೂ ಅವರ ಪೋಷಕರಿಗೆ ದಿನಾಂಕ 19 ರಂದು ಶಿಬಿರಕ್ಕೆ ಬರಲು ಅನುಕೂಲವಾಗುವಂತೆ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ವರೆಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಬೆಳಗ್ಗಿನ ಉಪಹಾರ ಮತ್ತು ಭೋಜನದ ವ್ಯವಸ್ಥೆ: ಶಿಬಿರಕ್ಕೆ ಆಗಮಿಸುವ ಫಲಾನುಭವಿಗಳು ಮತ್ತು ಅವರ ಪೋಷಕರು ಹಾಗೂ ಸೇವಾರ್ಧಿಗಳಿಗೆ ಬೆಳಗಿನ ಉಪಹಾರ ಮತ್ತು ಭೋಜನದ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುರೇಶ ಅಮೀನ್,ಡಾ.ವಸಂತ್ ಕುಮಾರ್ ಪೆರ್ಲಾ,ಡಾ.ದೇವಿಪ್ರಸಾದ್ ಹೆಜಮಾಡಿ ಹಾಗೂ ಡಾ.ದೇವದಾಸ್ ಪುತ್ರನ್ ಉಪಸ್ಥಿತರಿದ್ದರು.