ಉಳ್ಳಾಲದ ಕೋಟೆಕಾರ್ ನಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ! ಗನ್ ತೋರಿಸಿ ಚಿನ್ನಾಭರಣ ದೋಚಿ ಪರಾರಿ!!


ಅಂದಾಜು 13 ಕೋಟಿ ರೂ. ಮೌಲ್ಯದ ಆಭರಣ ದರೋಡೆ.

ಹಿಂದಿ ಭಾಷೆ ಮಾತಾಡುತ್ತಿದ್ದ 5-6 ಮಂದಿ ಮುಸುಕುಧಾರಿಗಳಿಂದ ಕೃತ್ಯ.

ದರೋಡೆ ಬಳಿಕ ಫಿಯೇಟ್ ಕಾರಲ್ಲಿ ಪರಾರಿ.

ಪೊಲೀಸ್ ತಂಡಗಳಿಂದ ಎಲ್ಲೆಡೆ ಶೋಧ ಕಾರ್ಯ.

ಸ್ಥಳಕ್ಕೆ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಪರಿಶೀಲನೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

ಮಂಗಳೂರು: ಕೋಟೆಕಾರ್ ಸರಕಾರಿ ಸಂಘದಲ್ಲಿ ಹಗಲು ದರೋಡೆ ನಡೆದಿದೆ.

ಸಿ.ಎಂ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಬೇಟಿ ನೀಡುವ ಸಂದರ್ಭದಲ್ಲಿ ಆರು ಜನ ನುಗ್ಗಿ ದರೋಡೆ ಮಾಡಿದ್ದಾರೆ.

ಕೋಟೆಕಾರ್ ನಲ್ಲಿ ಬ್ಯಾಂಕ್ ಕಳ್ಳತನ ನಡೆದಿದ್ದು ೧ ಕೆ.ಜಿ ಚಿನ್ನಾಭರಣ,ಕೋಟಿ ರುಪಾಯಿ ಲೂಟಿ ಹೊಡೆದದ್ದಾರೆಂದು ಮಾಹಿತಿ ದೊರೆತಿದೆ.

ಗನ್ ಪಾಯಿಂಟ್ ನಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದು ಐವರು ಸದಸ್ಯರೊಂದಿಗೆ ದುಷ್ಕರ್ಮಿಗಳು ಫಿಯೆಟ್ ಕಾರಿನಲ್ಲಿ ಬಂದಿದ್ದಾರೆಂದು ತಿಳಿದಿದೆ. ದುಷ್ಕರ್ಮಿಗಳು ಸ್ಥಳದಿಂದ ಮಂಗಳೂರು ಕಡೆಗೆ ಪರಾರಿಯಾಗಿದ್ದು ಇದೀಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

error: Content is protected !!