ಮಂಗಳೂರು: “15ನೇ ವರ್ಷದ ಜಪ್ಪಿನಮೊಗರು ಶ್ರೀ ಗಣೇಶೋತ್ಸವ ಕಾರ್ಯಕ್ರಮ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜಪ್ಪಿನಮೊಗರು ಮಂಗಳೂರು ಇದರ ಆಶ್ರಯದಲ್ಲಿ ಇದೇ ಸೆ. 18ನೇ ಸೋಮವಾರದಿಂದ 21ನೇ ಗುರುವಾರದವರೆಗೆ ಊರ ಹಾಗೂ ಪರವೂರ ಭಕ್ತಾಭಿಮಾನಿಗಳ ಸಹಕಾರದಿಂದ ವಿಜೃಂಭಣೆಯಿಂದ
ಆಚರಿಸಲಾಗುವುದು” ಎಂದು ಸಮಿತಿಯ ಅಧ್ಯಕ್ಷ ಜೆ. ನಾಗೇಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
18ನೇ ಸೋಮವಾರದಂದು ಸಂಜೆ 4 ಗಂಟೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಜಪ್ಪಿನಮೊಗರು ಶ್ರೀ ವೈದ್ಯನಾಥ ಮಹಾದ್ವಾರದಿಂದ ಶ್ರೀ ಗಣಪತಿಯ ವಿಗ್ರಹವನ್ನು ಹಾಗೂ ಭಕ್ತರ ಸಹಕಾರದೊಂದಿಗೆ ನಿರ್ಮಾಣಗೊಂಡ ಬೆಳ್ಳಿಯ ಪ್ರಭಾವಳಿಯನ್ನು
ಶ್ರೀ ಗಣೇಶ ಮಂಟಪಕ್ಕೆ ತರಲಾಗುವುದು. ಆನಂತರ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಭಾ ಕಾರ್ಯಕ್ರಮವನ್ನು ಶ್ರೀಮತಿ ಸುರೇಖಾ ಎಸ್. ರೈ ಮತ್ತು ಸುರೇಶ ರೈ, ಮಂಗಳೂರು ಇವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ರಮಾನಾಥ
ಹೆಗಡೆ, ಆಡಳಿತ ಮೊಕ್ತಸರರು, ಶ್ರೀ ಮಂಗಳಾದೇವಿ ದೇವಸ್ಥಾನ, ಮಂಗಳೂರು ಇವರು ವಹಿಸಲಿದ್ದು ಇನ್ನಿತರ ಗಣ್ಯರು ಭಾಗವಹಿಸಲಿರುವರು. ಆನಂತರ ವಿದುಷಿ ಸುನೀತಾ ಉಳ್ಳಾಲ್ ಇವರ ಶಿಷ್ಯವೃಂದದಿಂದ ನೃತ್ಯರೂಪಕ, ಹಾಗೂ ಲ| ದೇವದಾಸ್ ಕಾಪಿಕಾಡ್‌ರವರು ರಚಿಸಿ,
ನಿರ್ದೇಶಿಸಿದ ‘ನಾಯಿದ ಬೀಲ’ ತುಳು ಹಾಸ್ಯ ನಾಟಕ ನಡೆಯಲಿರುವುದು.
ದಿನಾಂಕ 19ರಂದು ಬೆಳಿಗ್ಗೆ 7 ಗಂಟೆಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿಗಳು, ದೇರೆಬೈಲ್ ಇವರ ಪೌರೋಹಿತ್ಯದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನೆ ನಡೆಯಲಿರುವುದು ಹಾಗೂ ರೂ. 14 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಬೆಳ್ಳಿಯ ಪ್ರಭಾವಳಿಯನ್ನು ಶ್ರೀ ಮಹಾಗಣಪತಿ ದೇವರಿಗೆ ಸಮರ್ಪಿಸಲಾಗುವುದು. ಭಾಸ್ಕರ ಪಿ. ಮತ್ತು ಗೀತಾ ಪಿ. ಕಂರ್ಬೆಟ್ಟುರವರು ನಂದಾದೀಪ ಬೆಳಗಿಸಲಿರುವರು. ಬೆಳಿಗ್ಗೆ ಗಂಟೆ 9ಕ್ಕೆ ಪ್ರತಿಷ್ಠಾಪನಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಇವರು ನಡೆಸಲಿದ್ದಾರೆ.
ಬೆಳಿಗ್ಗೆ 9.30 ಗಂಟೆಗೆ ಹಸಿರು ತೆನೆ ವಿತರಣೆ, ನಂತರ ಭಜನಾ ಕಾರ್ಯಕ್ರಮ, ಮಧ್ಯಾಹ್ನದ ಮಹಾಪೂಜೆಯ ನಂತರ ಮಧ್ಯಾಹ್ನ 2.00 ಗಂಟೆಗೆ ದಿ. ಕೇಶವ ಅಂಗಡಿಮಾರ್ ಇವರ ಸ್ಮರಣಾರ್ಥ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಇವರು ಸಾದರಪಡಿಸುವ ‘ಶ್ವೇತಕುಮಾರ
ಚರಿತ್ರೆ’ ಯಕ್ಷಗಾನ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು.
ಸಂಜೆ 5.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದ್ದು ಸ್ಪೀಕರ್ ಯು.ಟಿ. ಖಾದರ್ ಸಹಿತ ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಿಶೇಷ ಅತಿಥಿಯಾಗಿ ಚಲನಚಿತ್ರ ನಟ
ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಆಗಮಿಸಲಿದ್ದಾರೆ.
ಸಂಜೆ 7.30ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಸಾರ್ವಜನಿಕ ರಂಗಪೂಜೆ ಹಾಗೂ ಮಹಾಪೂಜೆ, ಆನಂತರ ಅನ್ನಸಂತರ್ಪಣೆ ನಡೆಯಲಿರುವುದು.
20ನೇ ಗುರುವಾರ ಬೆಳಿಗ್ಗೆ 8.00 ರಿಂದ ವಿವಿಧ ಧಾರ್ಮಿಕ
ಕಾರ್ಯಕ್ರಮಗಳು, ಸಂಜೆ 4.00 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮಭೂಷಣ ರಾಜರ್ಷಿ
ಡಾ| ಡಿ. ವೀರೇಂದ್ರ ಹೆಗ್ಗಡೆ ಇವರು ಆಶೀರ್ವಚನ ನೀಡಲಿದ್ದಾರೆ.
ಸಂಜೆ 3.30ಕ್ಕೆ ಜಪ್ಪಿನಮೊಗರು ಶ್ರೀ ವೈದ್ಯನಾಥ ಮಹಾದ್ವಾರದಿಂದ ವಿವಿಧ ವಾದ್ಯ- ಘೋಷಗಳೊಂದಿಗೆ ಚೆಂಡೆ, ಕೀಲುಕುದುರೆಗಳೊಂದಿಗೆ ಭಕ್ತಾಭಿಮಾನಿಗಳು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪಿನ ಮಹಿಳೆಯರು ಡಾ| ಡಿ. ವೀರೇಂದ್ರ ಹೆಗ್ಗಡೆ, ರಾಜ್ಯಸಭಾ ಸದಸ್ಯರು ಹಾಗೂ ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ, ಧರ್ಮಸ್ಥಳ ಇವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀ ಗಣೇಶ ಮಂಟಪದ ಸಭಾ ವೇದಿಕೆಗೆ ಕರೆ ತರಲಾಗುವುದು. ಸಂಜೆ ಗಂಟೆ 6.00 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8.00ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ತಾ: 21ರ ಬೆಳಿಗ್ಗೆ 7.30ಕ್ಕೆ 108 ತೆಂಗಿನಕಾಯಿಯ ಮಹಾಗಣಯಾಗ ಪ್ರಾರಂಭ. ಬೆಳಿಗ್ಗೆ ಗಂಟೆ 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, 1.00 ಗಂಟೆಗೆ ಮಹಾಪೂಜೆ ತದನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30ರಿಂದ ದೇವರ ಭವ್ಯವಾದ ಶೋಭಾಯಾತ್ರೆ ರಾತ್ರಿ 11.00 ಗಂಟೆಗೆ ನೇತ್ರಾವತಿ ನದೀ ತೀರದಲ್ಲಿ ಜಲಾಧಿವಾಸ ಮಾಡಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರುಗಳಾದ ಉದಯ ಕೊಟ್ಟಾರಿ ಬಜಾಲ್, ಗಣೇಶ ಸಾಲಿಯಾನ್, ಸುಧಾಕರ ಜೆ., ಟಿ. ಪ್ರವೀಣಚಂದ್ರ ಆಳ್ವ, ಶ್ರೀಧರ್‌ರಾಜ್ ಶೆಟ್ಟಿ, ಗಣೇಶ್ ಶೆಟ್ಟಿ ಕಂರ್ಬುಕೆ ಮುಖ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಶೈಲೇಶ್ ಭಂಡಾರಿ, ಸಂಚಾಲಕರುಗಳಾದ ಪ್ರಾಣೇಶ್ ರಾವ್ ತಂದೊಳಿಗೆ, ಹರೀಶ್ ಶೆಟ್ಟಿ ತಾರ್ದೊಲ್ಯ ಇನ್ನಿತರರು ಉಪಸ್ಥಿತರಿದ್ದರು.