“ಬಿಜೆಪಿಯ ದುರ್ವರ್ತನೆಗೆ ಸೂಕ್ತ ಉತ್ತರ” -ಮೋಹನ್ ಕೋಟ್ಯಾನ್

ಮುಲ್ಕಿ: ನಿನ್ನೆ ನಡೆದ ಹಳೆಯಂಗಡಿ ಗ್ರಾ.ಪಂ. ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿಜಯೋತ್ಸವದ ಬಳಿಕ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ರವರು ಮಾಧ್ಯಮದವರ ಜೊತೆ ಕಾಂಗ್ರೆಸ್ ನಾಯಕ ಮಿಥುನ್ ರೈ ಬಗ್ಗೆ ಕೆಲವು ಸಣ್ಣತನದ ಮಾತುಗಳನ್ನು ಆಡಿದ್ದು ಇದನ್ನು ನಾವು ಖಂಡಿಸುತ್ತೇವೆ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಹೇಳಿದ್ದಾರೆ.

ಅವರು ಹಳೆಯಂಗಡಿಯ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿ ಶಾಸಕರು ಕಳೆದ ಕೆಲ ದಿನಗಳ ಹಿಂದೆ ತಮ್ಮದೇ ಕ್ಷೇತ್ರದ ಇರುವೈಲ್ ಎಂಬಲ್ಲಿ ಹಿಂಬಾಗಿಲಿನ ಮೂಲಕ ಪಂಚಾಯತ್ ಕಟ್ಟಡವನ್ನು ಉದ್ಘಾಟನೆ ಮಾಡಿದ್ದು ,ಅಲ್ಲದೆ ಕಟೀಲು ಶ್ರೀ ದೇವರ ಆಣೆ ಪ್ರಮಾಣ ಮಾಡಿ ಕೃಷಿಕರನ್ನು ಮೋಸ ಮಾಡಿ ಕೈಗಾರಿಕೆಗೆ ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ ಬಗ್ಗೆ ಜನರಿಗೆ ಅವರ ಯೋಗ್ಯತೆ ಏನು ಎಂದು ಗೊತ್ತಾಗಿದೆ. ಇಂಥವರಿಗೆ ಮಿಥುನ ರೈ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಶಾಸಕ ಕೋಟ್ಯಾನ್ ವಿರುದ್ಧ ಹರಿಹಾಯ್ದರು.
ಅವರು ಮಾತನಾಡಿ ಹಳೆಯಂಗಡಿ ಗ್ರಾ.ಪಂ.ಚುನಾವಣೆಯಲ್ಲಿ ಕೋರ್ಟ್ ಮೂಲಕ ಆದೇಶ ಹೊರಡಿಸಿ ಪಂಚಾಯತ್ ಸದಸ್ಯೆ ಜಲಜಾ ಪಾಣಾರ್ ರವರನ್ನು ಅನರ್ಹಗೊಳಿಸಿರಬಹುದು. ನಾವು ಕಾನೂನು ಹೋರಾಟ ಮಾಡುತ್ತೇವೆ. ಅದೇ ರೀತಿ ಬಿಜೆಪಿ ಬೆಂಬಲಿತ ಅಂದಿನ ಗ್ರಾ.ಪಂ ಸದಸ್ಯೆ ಸವಿತಾ ಎಂಬವರು ಅಂದಿನ ಅಧ್ಯಕ್ಷೆ ಜಲಜಾ ಪಾಣಾರ್ ರವರ ಸಹಿ ಫೋರ್ಜರಿ ಮಾಡಿ ಮೀನುಗಾರಿಕಾ ಇಲಾಖೆಯಿಂದ ಹಣ ಮಂಜೂರು ಮಾಡಿಸಿ ಭ್ರಷ್ಟಾಚಾರ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಶಾಸಕರು ಯಾಕೆ ಮೌನವಾಗಿದ್ದಾರೆ? ಎಂದು ಹೇಳಿದ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಶಾಸಕರಿಗೆ ನೈತಿಕ ಹಕ್ಕು ಇಲ್ಲ ಎಂದರು.
ನಿನ್ನೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಸಂದರ್ಭದಲ್ಲಿ ಗಲಾಟೆ ಮಾಡಿದ್ದು ಶುರು ಮಾಡದ್ದೇ ಬಿಜೆಪಿ ಕಾರ್ಯಕರ್ತರು ಎಂದು ಹೇಳಿದ ಅವರು ಬಿಜೆಪಿಯ ದಬ್ಬಾಳಿಕೆಗೆ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ ಯಾವುದೇ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ದುರ್ವರ್ತನೆ ತೋರಿದರೆ ಅದೇ ಜಾಗದಲ್ಲಿ ಕಾಂಗ್ರೆಸ್ ಪಕ್ಷ ಉತ್ತರ ನೀಡಲು ಸಿದ್ದ ಎಂದರು. ನಿನ್ನೆ ಕೋರ್ಟಿನ ಆದೇಶವನ್ನು ಅವರದೇ ರೀತಿಯಲ್ಲಿ ಅರ್ಥ ಮಾಡಿಕೊಂಡು ಚುನಾವಣಾ ಅಧಿಕಾರಿಗಳ ಮೂಲಕ ಮತದಾನ ನಡೆಸಿದ್ದಾರೆ ಈ ಬಗ್ಗೆ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್, ಕಾಂಗ್ರೆಸ್ ನಾಯಕರಾದ ಮಂಜುನಾಥ ಕಂಬಾರ ಬಾಲಚಂದ್ರ ಕಾಮತ್ ಹಳೆಯಂಗಡಿ ಗ್ರಾ.ಪಂ ಸದಸ್ಯರಾದ ಅನಿಲ್ ಪೂಜಾರಿ ಅಬ್ದುಲ್ ಖಾದರ್ ಉಪಸ್ಥಿತರಿದ್ದರು

error: Content is protected !!