ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಪಡ್ಲಕ್ಯಾರು
ಫ್ರೆಂಡ್ಸ್ ಕ್ಲಬ್ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ತೃತೀಯ ವರ್ಷದ ಕೆಸರು ಗದ್ದೆ ಕ್ರೀಡಾಕೂಟವನ್ನು ಎಳತ್ತೂರು ದೇವಸ್ಥಾನದ ಆಡಳಿತ ಮೋಕ್ತೇಸರರಾದ ಸಂತೋಷ್ ಕುಮಾರ್ ಹೆಗ್ಡೆ ಉದ್ಘಾಟಿಸಿ ಮಾತನಾಡಿ ಹಿಂದಿನ ಕಾಲದ ಕೃಷಿ ಬದುಕನ್ನು ನಂಬಿಕೊಂಡಿರುವ ಗ್ರಾಮೀಣ ಪ್ರದೇಶದ ಜನತೆ ಕ್ರೀಡೋತ್ಸವ ಮಾಡುವ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದರು
ಎಳತ್ತೂರು ದೇವಸ್ಥಾನದ ಅರ್ಚಕರಾದ ನಾಗ. ವಿ. ಭಟ್ ಆಶೀರ್ವಚನ ನೀಡಿದರು. ಮಾಜೀ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಮಾಜೀ ತಾ. ಪಂ ಸದಸ್ಯ ದಿವಾಕರ ಕರ್ಕೇರ, ಸುನಿಲ್ ಕುಮಾರ್ ದಾಮಸ್ಕಟ್ಟೆ, ಸುರೇಶ್ ಶೆಟ್ಟಿ ನಡಿಯಾಲ್ ಗುತ್ತು, ಶಂಕರ್ ಶೆಟ್ಟಿ ಹವಲ್ದಾರ್ ಕೋಡಿ,ಎಳತ್ತೂರು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ನಿತಿನ್ ಎಳತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಮೀರಾ ಶೆಟ್ಟಿ ಎಳತ್ತೂರು ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಬಳಿಕ ಕೆಸರುಗದ್ದೆ ಕ್ರೀಡಾಕೂಟ ನಡೆಯಿತು