ಹಳೆಯಂಗಡಿ: ಕೆಮ್ರಾಲ್ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಯ್ಯದ್ದಿ ಪಕ್ಷಿಕೆರೆ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶೋಭಾ ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಕೆಮ್ರಾಲ್ ಪಂಚಾಯತ್ ನಲ್ಲಿ ಒಟ್ಟು 17 ವಾರ್ಡ್ ಗಳಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 10 ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 7 ಇದ್ದುಸರಕಾರದ ನಿಯಮಗಳಂತೆ ಅಧ್ಯಕ್ಷ ಹುದ್ದೆ ಹಿಂದುಳಿದ ವರ್ಗ (ಅ )ಸ್ಥಾನಕ್ಕೆ ಮೀಸಲಾಗಿದ್ದು ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಯ್ಯದ್ದಿ ರವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾಲತಿ ರವರನ್ನು 11-6 ಮತಗಳಿಂದ ಸೋಲಿಸಿ ವಿಜಯಿಯಾಗಿದ್ದಾರೆ. ವಿಶೇಷವೆಂದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯೊಬ್ಬರು ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿಗೆ ಮತ ಹಾಕಿದ್ದಾರೆ.
ಉಪಾಧ್ಯಕ್ಷ ಹುದ್ದೆ ಎಸ್ಸಿ ಪಂಗಡಕ್ಕೆ ಮೀಸಲಿಟ್ಟಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾರೂ ಇಲ್ಲದ ಕಾರಣ ಬಿಜೆಪಿ ಬೆಂಬಲಿತ ಸದಸ್ಯೆ ಶೋಭಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಎರಡು ಪಕ್ಷದ ಸದಸ್ಯರು ವಿಜಯಘೋಷ ಹಾಗೂ ಅಭಿನಂದನೆ ಸಲ್ಲಿಸಿ ಸಂಭ್ರಮಿಸಿದರು.
ಚುನಾವಣಾ ಅಧಿಕಾರಿಯಾಗಿ ವಯಸ್ಕರ ಶಿಕ್ಷಣಾಧಿಕಾರಿ ಲೋಕೇಶ್ ಸಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾ, ಕಾರ್ಯದರ್ಶಿ ಕೇಶವ ದೇವಾಡಿಗ ಸಹಕರಿಸಿದ್ದರು.
ಈ ಸಂದರ್ಭ ಕೆಪಿಸಿಸಿ ಕೋಆರ್ಡಿನೇಟರ್ ಎಚ್. ವಸಂತ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮಾಜೀ ಮಂಡಲ ಪ್ರಧಾನ ಬಾಲಾದಿತ್ಯ ಆಳ್ವ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಕಾಂಗ್ರೆಸ್ ನಾಯಕರಾದ ಪ್ರವೀಣ್ ಬೊಳ್ಳೂರು, ಅಶ್ವಿನ್ ಆಳ್ವ, ಚಂದ್ರಶೇಖರ ಕೊಯಿಕುಡೆ, ಕಿರಣ್ ಶೆಟ್ಟಿ ಕೆರೆಮನೆ, ಉತ್ತಮ್ ಮೈಲೋಟ್ಟು, ಟಿ ಎಚ್ ಮಯ್ಶದ್ದಿ ಕಿನ್ನಿಗೋಳಿ, ಅನಿಲ್ ಪೂಜಾರಿ ಸಸಿಹಿತ್ಲು, ಪಂಚಾಯತ್ ಸದಸ್ಯರಾದ ಸುರೇಶ್ ಪಂಜ, ರಾಜೇಶ್ ಶೆಟ್ಟಿ, ನವೀನ್ ಸಾಲ್ಯಾನ್, ಕೇಶವ ಪೂಜಾರಿ, ಜಾಕ್ಸನ್ ಸಲ್ದಾನ, ಲೀಲಾ ಕೃಷ್ಣಪ್ಪ, ರೇವತಿ ಶೆಟ್ಟಿಗಾರ್, ಮೆಲಿಟಾ, ಶಶಿ ಸುರೇಶ್, ಬಿಜೆಪಿ ಬೆಂಬಲಿತ ಸದಸ್ಯರಾದ ನಾಗೇಶ್ ಅಂಚನ್,ಹರಿಪ್ರಸಾದ್ ವಿ.ಶೆಟ್ಟಿ ಮಾಲತಿ ಆಚಾರ್ಯ, ಅಮೃತ ಜಯಂತಿ ಶೆಟ್ಟಿ, ಸುಮಿತ್ರ, ತಾಪಂಮಾಜೀ ಸದಸ್ಯೆ ಬೇಬಿ ಕೋಟ್ಯಾನ್, ಬಿಜೆಪಿ ನಾಯಕರಾದ ಅಮರ್ ಪಕ್ಷಿಕೆರೆ, ಸಚಿನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು