ಮುಲ್ಕಿ: ಜೈ ತುಳುನಾಡು ಸಂಘಟನೆಯ ಪ್ರಧಾನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಮುಲ್ಕಿ ಕೆನರಾ ಬ್ಯಾಂಕ್ ಬಳಿ ನಡೆಯಿತು. ಬಳಿಕ ಸಂಘಟನೆ ಬೆಳೆದು ಬಂದ 9ನೇ ವರ್ಷದ ವಾರ್ಷಿಕೋತ್ಸವ ಪುನರೂರು ಟೂರಿಸ್ಟ್ ಹೋಂ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ ತುಳು ಭಾಷೆಗೆ ರಾಜ್ಯದಲ್ಲಿ ವಿಶೇಷ ಸ್ಥಾನಮಾನ ನೀಡಬೇಕು ಹಾಗೂ ಸಂವಿಧಾನದ ಎಂಟನೇ ಪರಿಛೇದದಲ್ಲಿ ಸೇರಿಸಲು ಪ್ರಬಲ ಹಕ್ಕೊತ್ತಾಯ ನಡೆಸಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಳುನಾಡು ಸಂಸ್ಥೆಯ ವಿಶು ಶ್ರೀಕೇರ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಾ. ಆಕಾಶ್ ರಾಜ್ ಜೈನ್, ಟೈಮ್ಸ್ ಆಫ್ ಕುಡ್ಲ ತುಳುಪತ್ರಿಕೆ ಸಂಪಾದಕ ಎಸ್ ಆರ್ ಬಂಡಿಮಾರ್, ವಕೀಲರಾದ ಗಿರೀಶ್ ಶೆಟ್ಟಿ ಶಿಬರೂರು, ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಜೈ ತುಳುನಾಡು ಸಂಘಟನೆಯ ಉಪಾಧ್ಯಕ್ಷ ಉದಯ ಪೂಂಜ, ಕಿರಣ್ ತುಳುವ, ಪೂರ್ಣಿಮಾ ಕಿರಣ್ ಮತ್ತಿತರರು ಉಪಸ್ಥಿತರಿದ್ದರು ಪೂರ್ಣಿಮಾ ಬಂಟ್ವಾಳ ನಿರೂಪಿಸಿದರು