“ಮಕ್ಕಳು ದೃಢ ಸಂಕಲ್ಪದಿಂದ ಶಿಕ್ಷಣ ಪಡೆದರೆ ಸಾಧಕರಾಗಲು ಸಾಧ್ಯ” -ವೇ.ಮೂ. ಸುಬ್ರಹ್ಮಣ್ಯ ರಾವ್

ಮುಲ್ಕಿ: ಶಿವಳ್ಳಿ ಸ್ಪಂದನ ಮಂಗಳೂರು ವಲಯದ ಸಹಯೋಗದೊಂದಿಗೆ ಶಿವಳ್ಳಿ ಸ್ಪಂದನ ಪಾವಂಜೆ ಸಹಭಾಗಿತ್ವದಲ್ಲಿ ಪ್ರತಿಭಾ ಪುರಸ್ಕಾರ -2023 ಕಾರ್ಯಕ್ರಮ ಹಳೆಯಂಗಡಿ ಶ್ರೀ ರಾಮಾನುಗ್ರಹ ಸಭಾಗೃಹ ದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವೇ.ಮೂ. ಸುಬ್ರಹ್ಮಣ್ಯ ರಾವ್ ತೋಕೂರು ರವರು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಇಂದಿನ ದಿನಗಳಲ್ಲಿ ರಾಷ್ಟ್ರ ನಮಗೇನು ಮಾಡಿದೆ ಎಂದು ಕೇಳುವುದಕ್ಕಿಂತ ರಾಷ್ಟ್ರದಲ್ಲಿ ಸುಭಿಕ್ಷೆಗಾಗಿ ನಾವು ತ್ಯಾಗ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಅವರು ಮಾತನಾಡಿ ಇಂದಿನ ಯುಗದಲ್ಲಿ ಕಲಿಕೆಗೆ ಅನೇಕ ಮೂಲಭೂತ ಸೌಕರ್ಯಗಳು ದೊರೆಯುತ್ತಿದ್ದು ಮಕ್ಕಳು ದೃಢ ಸಂಕಲ್ಪದಿಂದ ಶಿಕ್ಷಣ ಪಡೆದರೆ ಸಾಧಕರಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಳ್ಳಿ ಸ್ಪಂದನ ಮಂಗಳೂರು ವಲಯದ ಅಧ್ಯಕ್ಷ ಕೃಷ್ಣ ಭಟ್ ಕದ್ರಿ ವಹಿಸಿ ಮಾತನಾಡಿ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಚಿಂತಕ ಅಂಗಡಿಮಾರು ದೇವೇಶ್ ಭಟ್ ಸುರತ್ಕಲ್ ಎನ್ ಐ ಟಿ ಕೆ ಡೀನ್ ಶ್ರೀಕಾಂತ್ ಎಸ್ ರಾವ್ , ಕಟೀಲು ಕಾಲೇಜಿನ ಉಪನ್ಯಾಸಕ ವಾಧಿರಾಜ ರಾವ್,ನಿವೃತ್ತ ಶಿಕ್ಷಕ ರಾಜಕುಮಾರ ಕೊಳುವೈಲು, ಕಾರ್ಯದರ್ಶಿ ಗಣೇಶ್ ಹೆಬ್ಬಾರ್, ಕೇಂದ್ರೀಯ ವಲಯದ ಉಸ್ತುವಾರಿ ಗಣೇಶ್ ತಂತ್ರಿ, ತಾಲೂಕು ವಲಯದ ಮಹಿಳಾ ಘಟಕದ ಅಧ್ಯಕ್ಷೆ ರಮಾಮಣಿ,
ಪಾವಂಜೆ ವಲಯದ ಅಧ್ಯಕ್ಷ ಸತೀಶ್ ಭಟ್, ಕಾರ್ಯದರ್ಶಿ ಪ್ರಸನ್ನ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಧಾಮಣಿ, ಮಾಧ್ಯಮ ಪ್ರತಿನಿಧಿ ಮೋಹನ್ ರಾವ್ ಪಾವಂಜೆ, ಮತ್ತಿತರರು ಉಪಸ್ಥಿತರಿದ್ದರು ಭಾವನಾ ವಿಷ್ಣುಮೂರ್ತಿ ಕೆರೆ ಮಠ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಹಾಗೂ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

error: Content is protected !!