ಮುಲ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡದಿರಲು ಮುಲ್ಕಿ ಸಮೀಪದ ಪಡುಪಣಂಬೂರು ಶ್ರೀ ಅನಂತಸ್ವಾಮಿ ಮೇಗಿನ ಬಸದಿಯಲ್ಲಿ ಮುಲ್ಕಿ ಸೀಮೆಯ ಜೈನ ಸಮುದಾಯದ ಸಮಾಜ ಬಾಂಧವರಿಂದ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಈ ಸಂದರ್ಭ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ಮಾಧ್ಯಮದ ಜೊತೆ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ವಿನಾಕಾರಣ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದು ಖಂಡನೀಯ ವಿಚಾರವಾಗಿದೆ. ಯಾವುದಕ್ಕೂ ಪ್ರಮುಖ ಸಾಕ್ಷಿ ಒದಗಿಸಿ ಮಾತನಾಡಿದರೆ ಉತ್ತಮ ಕಾರ್ಯವಾಗಿದ್ದು ಅನಗತ್ಯ ಗೊಂದಲ ಸೃಷ್ಟಿ ಸರಿಯಲ್ಲ ಎಂದರು .
ಅರ್ಚಕ ಬಾಬು ಇಂದ್ರ, ಪವಿತ್ರೇಶ್ ಜೈನ್,ಗೌತಮ್ ಜೈನ್ ಮುಲ್ಕಿ ಅರಮನೆ ಮತ್ತಿತರರು ಉಪಸ್ಥಿತರಿದ್ದರು