ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುಖಂಡ ಕೆಲವೇ ನಿಮಿಷಗಳಲ್ಲಿ ವಾಪಾಸ್!

ಮುಲ್ಕಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಣದ ಆಮಿಷ ಒಡ್ಡಿ ಆಪರೇಷನ್ ಕಮಲ ಮಾಡಿದ್ದಾರೆ ಎಂದು
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ವಿರುದ್ಧ ಮುಲ್ಕಿ
ಮೂಡಬಿದ್ರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ
ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಾತನಾಡಿ ಮೂಡಬಿದ್ರೆಯಲ್ಲಿ ನಡೆಯುವ ಸಮಾವೇಶಕ್ಕೆ ಮಧ್ಯಾಹ್ನ ಕಟೀಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅಮರ್ ಶೆಟ್ಟಿ ಎಂಬವರು ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯ ರಾಜೇಶ್ ಶೆಟ್ಟಿಯವರನ್ನು
ಕಾರಿನಲ್ಲಿ ಮೂಡಬಿದ್ರೆ ಕರೆದುಕೊಂಡು ಹೋಗಿ ಸಂಸದ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಸಮ್ಮುಖದಲ್ಲಿ ಮಧ್ಯಾಹ್ನ 1 ಗಂಟೆಗೆ ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ.
ಇದೇ ರೀತಿ ಸಂದೀಪ್ ಶೆಟ್ಟಿ ಎಂಬ ಬಿಜೆಪಿ
ಕಾರ್ಯಕರ್ತನನ್ನು ಪುನಃ ಬಿಜೆಪಿಗೆ ಸೇರಿಸಿದ್ದಾರೆ
ಇದು ಹಾಸ್ಯಾಸ್ಪದ ವಿಚಾರವಾಗಿದೆ ಸೇರ್ಪಡೆಗೊಂಡ
ಸ್ವಲ್ಪ ಅರ್ಧ ಗಂಟೆಯಲ್ಲಿ ರಾಜೇಶ್ ಶೆಟ್ಟಿ ಖಾತೆಗೆ
ಬಿಜೆಪಿ ನಾಯಕ ಅಮರ್ ಶೆಟ್ಟಿ ಪಕ್ಷಿಕೆರೆ ಎಂಬವರ
ಅಕೌಂಟ್‌ನಿಂದ 50,000 ರೂ ಬಂದಿದೆ.
ಆಪರೇಷನ್ ಕಮಲ ಮಾಡಿದ ಬಿಜೆಪಿ ಸಂಸದ
ಹಾಗೂ ರಾಜ್ಯಾಧ್ಯಕ್ಷರಿಗೆ ಹಾಗೂ ಶಾಸಕರಿಗೆ
ನಾಚಿಕೆಯಾಗಬೇಕು. ಭ್ರಷ್ಟಾಚಾರ ಮಾಡಿದ ಹಣದಿಂದ
ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಕೊಂಡುಕೊಳ್ಳುವ
ಹುನ್ನಾರ ನಡೆಸಿದ್ದು ಸಂಪೂರ್ಣ ವಿಫಲರಾಗಿದ್ದಾರೆ.
ಇದೀಗ ರಾಜೇಶ್ ಶೆಟ್ಟಿ ರವರಿಗೆ ಬೆದರಿಕೆ ಕರೆಗಳು
ಬರುತ್ತಿದ್ದು , ಭ್ರಷ್ಟಾಚಾರ ಮಾಡುತ್ತಿರುವ ಶಾಸಕರನ್ನು
ಕೂಡಲೇ ವಜಾ ಮಾಡಬೇಕು ಹಾಗು ಅವರ ವಿರುದ್ಧ
ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ
ಆಯೋಗಕ್ಕೆ ದೂರು ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಮ್ರಾಲ್ ಗ್ರಾಪಂ
ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಉಪಾಧ್ಯಕ್ಷ ಸುರೇಶ್ ಪಂಜ,
ಸದಸ್ಯರಾದ ಮಯ್ಯದ್ದಿ, ನವೀನ್, ಮೆಲಿಟಾ, ರೇವತಿ
ಪೂಜಾರಿ, ಕೇಶವ ಪೂಜಾರಿ, ಜಾಕ್ಸನ್ ಸಲ್ದಾನ,
ಶಶಿ ಸುರೇಶ್, ಪ್ರವೀಣ್ ಬೊಳ್ಳೂರು ಅಶ್ವಿನ್ ಆಳ್ವ
ಮತ್ತಿತರರು ಉಪಸ್ಥಿತರಿದ್ದರು.

error: Content is protected !!