ಸುರತ್ಕಲ್: ರಸ್ತೆ ದಾಟುತಿದ್ದಾಗ ಕಾರ್ ಡಿಕ್ಕಿಯಾಗಿ
ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಮುಕ್ಕ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನ ಮುಕ್ಕದಲ್ಲಿ ಆಯೋಜನೆ
ಮಾಡಲಾಗಿತ್ತು.ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳಾಲಿನ
ಜೀವನ್ ಕುಮಾರ್ (36) ಎಂಬವರು ಸಂಜೆ 4.30ರ ಸುಮಾರಿಗೆ ರಸ್ತೆ ದಾಟುತ್ತಿರುವ ಸಂದರ್ಭ ವೇಗವಾಗಿ
ಬಂದ ಕಾರ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಜೀವನ್ ಕುಮಾರ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರು
ಧರ್ಮಸ್ಥಳ ಮೇಳದಲ್ಲಿ ಸುಮಾರು 15
ವರ್ಷಗಳಿಗಿಂತಲೂ ಹೆಚ್ಚು ಸಮಯಗಳಿಂದ ಕೆಲಸ
ನಿರ್ವಹಿಸುತ್ತಿದ್ದರು. ಡಿಕ್ಕಿ ಹೊಡೆದು ಪರಾರಿಯಾದ ಕಾರ್ ಸಮೇತ ಚಾಲಕನನ್ನು ಹಳೆಯಂಗಡಿ ಬಳಿ ವಶಕ್ಕೆ ಪಡೆಯಲಾಗಿದೆ.