“ಐಕ್ಯತೆಯಿಂದ ಉತ್ತಮ ಕಾರ್ಯ ಸಾಧಿಸಬಹುದು” -ಸುಧಾಕರ ಎಸ್ ಪೂಂಜ

ಬಾಳ ತೊತ್ತಾಡಿ ಬ್ರಹ್ಮಕಲಶದ ಆಮಂತ್ರಣ ಪತ್ರಿಕೆ ಬಿಡುಗಡೆ
ಸುರತ್ಕಲ್: ಐಕ್ಯತೆಯಿಂದ ಉತ್ತಮ ಕಾರ್ಯಗಳನ್ನು ಸಾಧಿಸಬಹುದು ಎಂದು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜಾ ಹೇಳಿದರು
ಅವರು ಬಾಳ ತೊತ್ತಾಡಿ ಶ್ರೀ ನಾಗಬ್ರಹ್ಮಸ್ಥಾನ ಇಲ್ಲಿ ಮೇ 2 ರಿಂದ ಮೇ 7 ರ ತನಕ ನಡೆಯುವ ಶ್ರೀ ನಾಗಬ್ರಹ್ಮ ದೇವರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮ ಕಲಶಾಭಿಷೇಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಸರ್ವ ಭಕ್ತರ ಸಹಕಾರದಿಂದ ಕ್ಲಪ್ತ ಸಮಯದಲ್ಲಿ ದೇವರ ಅನುಗ್ರಹದಿಂದ ನಿರೀಕ್ಷಿತ ಸಮಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗುತ್ತಿರುವುದು ದೇವರ ಸಾನಿಧ್ಯದ ಸಾಕ್ಷಿ ಎಂದು ಅವರು ನುಡಿದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಭಂಡಾರಿ ಐಕಳಬಾವ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಜೆ. ಡಿ ವೀರಪ್ಪ, ಕರುಣಾಕರ ಶೆಟ್ಟಿ ಪಣಿಯೂರು ಗುತ್ತು ಶುಭ ಹಾರೈಸಿದರು.
ದೇವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ ಬಾಳದ ಗುತ್ತು, ಆಡಳಿತ ಸಮಿತಿಯ ಅಧ್ಯಕ್ಷ ಕೆ ದೇವದಾಸ ಶೆಟ್ಟಿ ಸಾನದ ಹೊಸ ಮನೆ, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ವೇಣು ವಿನೋದ್ ಶೆಟ್ಟಿ ಬಾಳ, ಧೀಕ್ಷಿತ್ ಭಂಡಾರಿ ಉಳ್ಳಾಲಗುತ್ತು, ಕೋಶಾಧಿಕಾರಿ ಜಯಲಕ್ಷ್ಮಿ ಆರ್ ಶೆಟ್ಟಿ ಮೇಗಿನ ಮನೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅನಿಲ್ ಶೆಟ್ಟಿ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ರಾವ್ ಬಾಳ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಬಾಳ, ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಮುಂಬಾಯಿ ಸಮಿತಿಯ ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಸಾನದ ಹೊಸಮನೆ ಸುಧಾಮ ಶೆಟ್ಟಿ, ಪುಷ್ಪರಾಜ ಅಡಪ್ಪ ಬಾಳ, ನಾಗೇಶ್ ಶೆಟ್ಟಿ ಸಾನದ ಹೊಸಮನೆ, ಪಂಚಾಯತ್ ಸದಸ್ಯರಾದ ಪದ್ಮನಾಭ ಸಾಲ್ಯಾನ್, ಸೌಮ್ಯ ಶೆಟ್ಟಿ, ಆಶಾ ಶಿವಾನಂದ ಶೆಟ್ಟಿ ಅತ್ತಾವರ, ದೇವಸ್ಥಾನ ಪ್ರಧಾನ ಅರ್ಚಕ ಗುರುರಾಜ್ ಭಟ್ ಯತಿರಾಜ ಸಾಲ್ಯಾನ್, ರಕ್ಷಿತ್ ಶೆಟ್ಟಿ, ಹೇಮಚಂದ್ರ ಶೆಟ್ಡಿ, ರವೀಂದ್ರ ಶೆಟ್ಟಿ ಮಧ್ಯ, ಮುಂತಾದವರು ಉಪಸ್ಥಿತರಿದ್ದರು. ಸುಧಾಮ ಶೆಟ್ಟಿ ಕಾರ್ಯಕ್ರಮ‌ ನಿರ್ವಹಿಸಿದರು.

error: Content is protected !!