ಸುರತ್ಕಲ್: ದೇಶದ ಅತೀ ದೊಡ್ಡ ಕಾರ್ಮಿಕ ಸಂಘಟನೆಗಳಲ್ಲಿ ಒಂದಾಗಿರುವ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಇದರ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಮನೋಹರ ಶೆಟ್ಟಿ ಅವರು ಮುಂದುವರೆಯಲಿದ್ದಾರೆ. ರಾಜ್ಯದ ತಾತ್ಕಾಲಿಕ ಇಂಟಕ್ ಸಮಿತಿಯು ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಪದಾಧಿಕಾರಿಯನ್ನು ಬದಲಾವಣೆ ಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವಂತಿದೆ.
ತಾತ್ಕಾಲಿಕ ಸಮಿತಿಗೆ ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ಅಧಿಕಾರ ಕೊಟ್ಟವರು ಯಾರು ಎಂದು ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಗುಡುಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಇಂಟಕ್ ಕಚೇರಿಯಲ್ಲಿ ಆಯೋಜಿಸಲಾದ ಇಂಟಕ್ ಪದಾಧಿಕಾರಿಗಳ ಹಾಗೂ ಕಾರ್ಮಿಕರ ಮಹಾಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಇಂಟಕ್ ಕಾರ್ಮಿಕ ಸಂಘಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲಿಷ್ಠವಾಗಿ ಕಟ್ಟಿದ್ದೇವೆ. ಕಾಂಗ್ರೆಸ್ ಪಕ್ಷದ ಮುಖಂಡರು ಇದರಲ್ಲಿ ಮೂಗು ತೂರಿಸಿ ಸಂಘಟನೆಯನ್ನ ದುರ್ಬಲಗೊಳಿಸುವ ಯತ್ನ ಮಾಡುದನ್ನು ಬಿಡಬೇಕು. ಇಲ್ಲದಿದ್ದರೆ ನಾವೂ ಕಾರ್ಮಿಕ ಸಂಘಟನೆಯ ಬಲಪ್ರದರ್ಶನ ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದರು.
ನವಮಂಗಳೂರು ಬಂದರಿನ ಮಾಜಿ ಟ್ರಸ್ಟ್ ಇಂಟಕ್ ಹಿರಿಯ ಮುಖಂಡ ಅಬೂಬಕ್ಕರ್ ಅವರು ಆಕ್ರೋಶವನ್ನು ವ್ಯಕ್ತಪಡಿಸಿ, ಕಾರ್ಮಿಕ ಸಂಘಟನೆ ನಾಯಕತ್ವವನ್ನ ಯಾರು ಬಲಿಷ್ಠಗಳಿಸುತ್ತಾರೋ ಅವರಲ್ಲಿ ಇದ್ದಾಗ ಮಾತ್ರ
ಮತ್ತಷ್ಟು ಕಾರ್ಮಿಕ ಪರ ಹೋರಾಟ ನಡೆಸಲು ಸಾಧ್ಯವಾಗುತ್ತದೆ. ಅಂತಹ ಕಾರ್ಮಿಕ ನಾಯಕರಲ್ಲಿ ಮನೋಹರ್ ಶೆಟ್ಟಿ ಒಬ್ಬರು.
ಇದೀಗ ರಾಜಕೀಯ ಕಾರಣಗಳಿಗಾಗಿ ಅಧ್ಯಕ್ಷ ಮನೋಹರ್ ಶೆಟ್ಟಿ ಅವರನ್ನ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಕೂಡದು.
ಒಂದು ವೇಳೆ ಕಾರ್ಮಿಕ ವಿರೋಧಿ ಕ್ರಮ ಕೈಗೊಂಡಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವೇ ಇಂಟರ್ ಕಾರ್ಮಿಕ ಸಂಘಟನೆ ಮುಂದಿನ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿ
ಸೂಕ್ತ ಉತ್ತರವನ್ನು ಕೊಡಬೇಕಾಗುತ್ತದೆ ಎಂದು ಸ್ಪಷ್ಟ ಸಂದೇಶ ಕಾಂಗ್ರೆಸ್ ಮುಖಂಡರಿಗೆ ರವಾನಿಸಿದರು.
ಹಿರಿಯ ಇಂಟಕ್ ಮುಖಂಡ ಕಳ್ಳಿಗೆ ತಾರನಾಥ ಶೆಟ್ಟಿ ಅವರು ಮಾತನಾಡಿ, ಕಾರ್ಮಿಕ ಸಂಘಟನೆಗೆ ಕೇವಲ ಅಧ್ಯಕ್ಷರಾದರೆ ಸಾಲದು
ಕಾರ್ಮಿಕ ಸಂಘಟನೆಯನ್ನು ಕಟ್ಟಿ ಬೆಳೆಸಲು ತಾಕತ್ತು ಇರುವವರು ಬೇಕಾಗುತ್ತದೆ
ಅಂತಹ ಶಕ್ತಿ ಧೃಡ ವಿಶ್ವಾಸ ಮನೋಹರ್ ಶೆಟ್ಟಿ ಅವರಲ್ಲಿದೆ .
ರಾಕೇಶ್ ಮಲ್ಲಿ ಹಾಗೂ ಮನೋಹರ್ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಕಾರ್ಮಿಕ ಸಂಘಟನೆಯನ್ನು ಬಲಿಷ್ಠವಾಗಿ ಬೆಳೆಸಿದವರು ಎಂದು ನುಡಿದರು.
ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ, ನ್ಯಾಯವಾದಿ ಇಂಟಕ್ ಕಾನೂನು ಸಲಹೆಗಾರ ದಿನಕರ್ ಶೆಟ್ಟಿ, ಕಳ್ಳಿಗೆ ತಾರನಾಥ ಶೆಟ್ಟಿ, ಇಂಟಕ್ ರಾಜ್ಯ ಉಪಾಧ್ಯಕ್ಷ ಬಿ.ಕೆ. ಸುರೇಶ್, ಅಬೂಬಕರ್, ಕಲಾವತಿ, ಜಿಲ್ಲಾ ಉಪಾಧ್ಯಕ್ಷ ಸ್ಟೀವನ್, ಜಿಲ್ಲಾ ಕಾರ್ಯದರ್ಶಿ ವಿನೋದ್ ರಾಜ್, ಪುನೀತ್ ಶೆಟ್ಟಿ, ಶಾಪಿ ಕೊತ್ತ ಮೊಟ್ಟೆ, ಪದ್ಮ ಸ್ಮಿತ್ ಜೈನ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.