
ಚಿಕ್ಕಮಗಳೂರು: ಅನ್ನ ಚೆಲ್ಲಿದ್ದಕ್ಕೆ ತಾಯಿ ಬೈದ್ರು ಅಂತ ಮನನೊಂದು ಅಪ್ರಾಪ್ತ ಬಾಲಕಿಯೊಬ್ಬಳು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ.

ಜಯಪುರ ಗ್ರಾಮದ ನಿವಾಸಿ ಸುಪ್ರಿತಾ (13) ಆತ್ಮಹತ್ಯೆಗೆ ಶರಣಾದ ಬಾಲಕಿ.
ಮಧ್ಯಾಹ್ನದ ವೇಳೆ ಸುಪ್ರಿತಾ ಮನೆಯಲ್ಲಿ ಊಟ ಮಾಡುತ್ತಾ ಟಿವಿ ವೀಕ್ಷಿಸುತ್ತಿದ್ದಳು. ಈ ಸಂದರ್ಭ ಆಕಸ್ಮಿಕವಾಗಿ ಕೈಯಲ್ಲಿದ್ದ ತಟ್ಟೆ ಬಿದ್ದು ಅನ್ನವೆಲ್ಲಾ ಚೆಲ್ಲಿತ್ತು. ಅದಕ್ಕೆ ತಾಯಿ, “ಯಾವಾಗಲೂ ಟಿವಿ ನೋಡುವುದೇ ಆಯಿತು, ಓದಿನ ಕಡೆ ಗಮನವಿಲ್ಲ. ಮೊದಲು ಚೆಲ್ಲಿರುವ ಅನ್ನವನ್ನು ಸ್ವಚ್ಛ ಮಾಡು” ಎಂದು ಮಗಳಿಗೆ ಬುದ್ಧಿ ಹೇಳಿ ಕೆಲಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ತಾಯಿ ಆಡಿದ ಮಾತಿನಿಂದ ತೀವ್ರವಾಗಿ ಮನನೊಂದ ಬಾಲಕಿ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ತನ್ನ ವೇಲ್‌ನಿಂದ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಮಗಳ ಸಾವಿನ ಸುದ್ದಿ ತಿಳಿದು ಬಂದಿದೆ.