ಸುರತ್ಕಲ್: “ಕಾಂಗ್ರೆಸ್ ಘೋಷಿಸಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳು ಜನರ ಬೆಲೆಯೇರಿಕೆ ಭಾರ ಇಳಿಸಲಿವೆ. ಜನರು ಕಾಂಗ್ರೆಸ್ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದಲ್ಲಿ ನಿಶ್ಚಿಂತೆಯಿಂದ ಜೀವನ ನಡೆಸಬಹುದು” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದರು.
ಅವರು ಮಂಗಳವಾರ ಮಲ್ಲೂರು ಗ್ರಾ.ಪಂ. ವ್ಯಾಪ್ತಿಯ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಆರ್.ಕೆ., ರಾಜ್ ಕುಮಾರ್ ಶೆಟ್ಟಿ ವಾಮಂಜೂರು, ಯು.ಪಿ.ಇಬ್ರಾಹಿಂ, ಮಲ್ಲೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ರಾವ್, ಎಮ್.ಕೆ.ಯೂಸುಫ್, ಅಫ್ಸತ್ ಪೆರ್ಮಂಕಿ, ಅಬೂಸಲಿ ದೆಮ್ಮಲೆ, ಅಬ್ದುಲ್ಲಾ ಮಲ್ಲೂರು, ಹಸನ್ ಬಾವ, ನೌಫಲ್ ಉದ್ದಬೆಟ್ಟು, ಪುರುಷೋತ್ತಮ್ ಚಿತ್ರಾಪುರ, ಮೊಹಮ್ಮದ್ ಶಮೀರ್, ಸಾಧಿಕ್ ಬದ್ರಿಯಾ ನಗರ, ಇಕ್ಬಾಲ್ ಕಿನ್ನಿಕಟ್ಟ, ಜಬ್ಬಾರ್ ಮಲ್ಲೂರು, ಅಶ್ರಫ್ ಬದ್ರಿಯಾ ನಗರ ಇನ್ನಿತರರು ಉಪಸ್ಥಿತರಿದ್ದರು.