‘ಪಡುಪಣಂಬೂರು ಸೀಮೆ ಅರಸು ಕಂಬಳ ಗ್ರಾಮೀಣ ಕ್ರೀಡೆಯನ್ನು ಪ್ರೋತ್ಸಾಹಿಸಿ’ -ದುಗ್ಗಣ್ಣ ಸಾವಂತರು

ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ ಅರಸು ಕಂಬಳ ಡಿಸೆಂಬರ್ 31ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಅರಮನೆ ಬಸದಿಯಲ್ಲಿ ನಡೆಯಿತು.

ಮುಲ್ಕಿ ಸೀಮೆ ಅರಸರಾದ ಎಂ ದುಗ್ಗಣ್ಣ ಸಾವಂತ ಅರಸರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆದು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭ ಅರಸರು ಮಾತನಾಡಿ ಪ್ರತಿಷ್ಠಿತ ಮುಲ್ಕಿ ಸೀಮೆಯ ಕಂಬಳ ಡಿಸೆಂಬರ್ 31ರಂದು ಅದ್ದೂರಿಯಾಗಿ ನಡೆಯಲಿದ್ದು ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡಿ ಯಶಸ್ವಿಗೊಳಿಸಲು ಮನವಿ ಮಾಡಿದರು. ಜಾಗತಿಕ ಬಂಟರ ಸಂಘದ ಒಕ್ಕೂಟದ ಐಕಳ ಹರೀಶ ಶೆಟ್ಟಿ ಮಾತನಾಡಿ ಕಂಬಳಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸಮಿತಿ ಅಧ್ಯಕ್ಷ ಕಿರಣ್‌ ಕುಮಾರ್ ಶೆಟ್ಟಿ ಕೊಲ್ನಾಡು ಗುತ್ತು ಮಾತನಾಡಿದರು.

ಈ ಸಂದರ್ಭ ಬಂಕಿನಾಯಕರು ಗೌತಮ್ ಜೈನ್ ಮುಲ್ಕಿ ಅರಮನೆ, ಕಂಬಳ ಸಮಿತಿಯ ಉಪಾಧ್ಯಕ್ಷರಾಗಿತರುವ ದಿನೇಶ್ ಸುವರ್ಣ ಬೆಳ್ಳಾಯರು, ಕಂಬಳ ಸಮಿತಿಯ ಕಾರ್ಯದರ್ಶಿ ಶ್ಯಾಮ್ ಪ್ರಸಾದ್, ಕೋಶಾಧಿಕಾರಿ ನವೀನ್ ಕುಮಾರ್, ಸಮಿತಿಯ ಸದಸ್ಯರಾದ ಶಶಿಂದ್ರ ಸಾಲ್ಯಾನ್, ಉಮೇಶ್ ಪೂಜಾರಿ, ಕೃಷ್ಣ ಹೆಬ್ಬಾರ್, ಚಂದ್ರಶೇಖರ್ ಕಾಸಪ್ಪಯ್ಯರ ಮನೆ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಮೋಹನ್ ಕೋಟ್ಯಾನ್ ಶಿಮಂತೂರು ಪುರುಷೋತ್ತಮ್ ತೋಕೂರು, ರವಿರಾಜ್ ಶೆಟ್ಟಿ ಜತ್ತ ಬೆಟ್ಟು, ಅಬ್ದುಲ್ ರಜಾಕ್, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ರಮೇಶ್‌ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!