
ಬೆಂಗಳೂರು: 2023ರ ಗ್ರೆನೇಡ್ ಪತ್ತೆ ಕೇಸ್‌ನಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಉಗ್ರನನ್ನು ಬೆಂಗಳೂರಿನಲ್ಲಿ ಎನ್‌ಐಎ(NIA) ಪೊಲೀಸರು ಬಂಧಿಸಿದ್ದಾರೆ.
ಶಂಕಿತ ಉಗ್ರ ಅರ್ಷದ್ ಖಾನ್ ಬಂಧಿತ ಆರೋಪಿ. ಆರ್.ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧನಕ್ಕೆ ಒಳಪಡಿಸಿದ್ದಾರೆ.

ಸಿಸಿಬಿ ಅಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ ಈ ಹಿಂದೆ ಅರ್ಷದ್ ಖಾನ್ ಅರೆಸ್ಟ್ ಆಗಿದ್ದ. ಶಂಕೆ ಮೇರೆಗೆ ಸಿಸಿಬಿ ಬಂಧಿಸಿತ್ತು. ನಂತರ ಜಾಮೀನಿನ ಮೇಲೆ ಹೊರಗಿದ್ದ. ಬಳಿಕ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು. ಜಾಮೀನು ಸಿಕ್ಕಿದ ಮೇಲೆ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಶಂಕಿತನ ಮೇಲೆ ಪ್ರೊಕ್ಲೋಮೇಷನ್ ಜಾರಿಯಾಗಿತ್ತು.
ಶಂಕಿತ ಉಗ್ರ ಕುಕ್ಕರ್ ಬಾಂಬ್ ಸ್ಪೋಟದ ರೂವಾರಿ ಜುನೈದ್ ಅಹ್ಮದ್ ಖಾಸಾ ಸ್ನೇಹಿತನಾಗಿದ್ದು, ಜುನೈದ್ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಶಂಕಿತ ಉಗ್ರ ಅರ್ಷದ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.