ಏ.1ರಿಂದ ಹೆದ್ದಾರಿ ಟೋಲ್‌ಗ‌ಳಲ್ಲಿ ನಗದು ಸ್ವೀಕಾರ ರದ್ದು!!

ನವದೆಹಲಿ: ದೇಶದಲ್ಲಿರುವ ಹೆದ್ದಾರಿ ಟೋಲ್‌ ಪ್ಲಾಜಾಗಳನ್ನು ಡಿಜಿಟಲೀಕರಣ ಮಾಡುವ ಉದ್ದೇಶದಿಂದ, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಹೊಸ ನಿಯಮವನ್ನು ತರಲು ಸಜ್ಜಾಗಿದೆ. ಅದರಂತೆ ಏ.1ರಿಂದ ಟೋಲ್‌ಗ‌ಳಲ್ಲಿ ನಗದು ಸೇವೆಯನ್ನು ಸ್ಥಗಿತಗೊಳಿಸಿ ಯುಪಿಐ ಅಥವಾ ಆನ್‌ಲೈನ್‌ ಪಾವತಿ, ಫಾಸ್ಟ್ಯಾಗ್‌ ಬಳಕೆಗಷ್ಟೇ ಅವಕಾಶ ಕೇಂದ್ರ ಚಿಂತಿಸುತ್ತಿದೆ.

ಈ ನಿಯಮ ಜಾರಿಯಾದ ಬಳಿಕ ವಾಹನ ಸವಾರರು ಕೇವಲ ಯುಪಿಐ ಅಥವಾ ಆನ್‌ಲೈನ್‌ ಮೂಲಕ ಇಲ್ಲವೇ, ಫಾಸ್ಟ್ಯಾಗ್‌ ಮೂಲಕವೇ ಟೋಲ್‌ ಪಾವತಿ ಮಾಡಬೇಕು. ಟೋಲ್‌ ಸಂಗ್ರಹದಲ್ಲಿ ದಕ್ಷತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುವುದು ಹಾಗೂ ಟೋಲ್‌ ಸಂಗ್ರಹದ ಕ್ರೋಢೀಕರಣ ಸುಲಭಗೊಳಿಸುವುದು ಈ ಪ್ರಸ್ತಾವಿತ ನಿಯಮದ ಗುರಿಯಾಗಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ತಿಳಿಸಿದೆ.

ಅಲ್ಲದೇ, ಈ ಕ್ರಮದಿಂದ ಟೋಲ್‌ ಪ್ಲಾಜಾ ಗಳಲ್ಲಿ ದಟ್ಟಣೆ ಕಡಿಮೆಯಾಗಿ ಪ್ರಯಾಣ ಸುಗಮವಾಗಲಿದೆ. ಟೋಲ್‌ ವಹಿವಾಟಿನಲ್ಲಿಯೂ ಪಾರದರ್ಶಕತೆ ಹೆಚ್ಚಲಿದೆ. ಕೆಲವು ವರ್ಷಗಳಿಂದ ಶೇ.98 ರಷ್ಟು ಫಾಸ್ಟ್ಯಾಗ್‌ ಬಳಕೆಯಾಗುತ್ತಿದ್ದು, ಇದೀಗ ನೂತನ ನಿಯಮಗಳು ಜಾರಿಯಾದರೆ ಸಂಪೂರ್ಣ ನಗದು ರಹಿತ ಟೋಲ್‌ ವಹಿವಾಟು ಯಶಸ್ವಿಯಾಗಲಿದೆ.

error: Content is protected !!