“ಮುಂದಿನ ದಿನಗಳಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ” -ಶಾಸಕ ವೈ.ಭರತ್ ಶೆಟ್ಟಿ

ಸುರತ್ಕಲ್: “ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸಿದ ಆತ್ಮಸಂತೃಪ್ತಿ ನನ್ನಲ್ಲಿದೆ” ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.


ಭಾನುವಾರ ಸುರತ್ಕಲ್ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವ ಸಭಾಂಗಣದಲ್ಲಿ ಸರಕಾರಿ ಇಲಾಖೆಗಳ ವಿವಿಧ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಏಳನೇ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
“ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಯೋಜನೆಗಳನ್ನು ಹೆಚ್ಚಿನ ಒತ್ತು ನೀಡಿ ಅನುಷ್ಠಾನಗೊಳಿಸಲಾಗಿದೆ. ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪಕ್ಷಾತೀತವಾಗಿ ಪ್ರಜಾಪ್ರಭುತ್ವದ ನೆಲೆಯಲ್ಲಿ ಸರ್ವರಿಗೂ ಒದಗಿಸಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದೇನೆ” ಎಂದರು.
ಹಕ್ಕು ಪತ್ರ, ಪಿಂಚಣಿ ಯೋಜನೆ, ಜಾತಿ ಪ್ರಮಾಣ ಅದಾಯ ಪ್ರಮಾಣ ಪತ್ರ, ಆಭಾ ಕಾರ್ಡ್, ಮತದಾರರ ಪಟ್ಟಿ ನೊಂದಣಿ, ಕೃಷಿ ಇಲಾಖೆಯ ಸವಲತ್ತುಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ವೇದಿಕೆಯಲ್ಲಿ ಮಂಗಳೂರು ಮೇಯರ್ ಜಯಾನಂದ ಅಂಚನ್, ಕಾರ್ಪೋ ರೇಟರ್ ಗಳಾದ ಶೋಭಾ ರಾಜೇಶ್, ನಯನಾ ಕೋಟ್ಯಾನ್, ವರುಣ್ ಚೌಟ, ವೇದಾವತಿ, ಸುಮಿತ್ರ ಕರಿಯ, ಸುನೀತಾ, ಸರಿತಾ ಶಶಿಧರ್, ಲೋಕೇಶ್ ಬೊಳ್ಳಾಜೆ, ಪ್ರಶಾಂತ್ ಮೂಡಾಯಿಕೊಡಿ,ಲಕ್ಷ್ಮೀ ಶೇಖರ ದೇವಾಡಿಗ, ರಾಜೇಶ್ ಬೈಕಂಪಾಡಿ, ಪಕ್ಷದ ಪ್ರಮುಖರಾದ ಸಂದೀಪ್ ಪಚ್ಚನಾಡಿ,ಗಣೇಶ್ ಹೊಸಬೆಟ್ಟು, ವಿಠಲಸಾಲ್ಯಾನ್, ವಸಂತ ಹೊಸಬೆಟ್ಟು,ಯೋಗಿಶ್ ಕುಳಾಯಿ, ಸುನೀಲ್ ಕುಳಾಯಿ, ರಾಘವೇಂದ್ರ ಶೆಣೈ, ದಿನಕರ್ ಇಡ್ಯಾ, ಪ್ರಮೀಳಾ ಕೋಟ್ಯಾನ್, ಪವಿತ್ರ ನಿರಂಜನ್, ಬೇಬಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!