ಸುರತ್ಕಲ್: “ಸಾರ್ವಜನಿಕ ಆಸ್ತಿಪಾಸ್ತಿ, ಜನರ ಪ್ರಾಣ ರಕ್ಷಣೆ ನಮ್ಮ ಹೊಣೆ, ಸುರತ್ಕಲ್ ಟೋಲ್ ಗೇಟ್ ಹೋರಾಟದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಂಗಳೂರಿನಲ್ಲಿ ಈ ಹಿಂದೆ ನಡೆದಿರುವ ಅದೆಷ್ಟೋ ಹೋರಾಟಗಳು ಶಾಂತಿಯುತವಾಗಿ ನಡೆದಿವೆ. ಪೊಲೀಸರ ಮನವಿಗೆ ಇಲ್ಲಿನ ಜನರು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ಪ್ರತಿಭಟನೆ ಯಾವುದೇ ರೀತಿಯಲ್ಲಿ ಅಶಾಂತಿಗೆ ಭಂಗ ಉಂಟು ಮಾಡದ ರೀತಿ ಶಾಂತಿಯುತವಾಗಿ ನಡೆಯುವ ವಿಶ್ವಾಸವಿದೆ” ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ. ಅವರು ಟೋಲ್ ವಿರೋಧಿ ಹೋರಾಟ ಸಮಿತಿ ಪ್ರತಿಭಟನಾ ಸ್ಥಳದಲ್ಲಿ ಮಾತಾಡಿದರು.