ಮಂಗಳೂರಿನ ಅಸ್ಮಿತ ಸ್ವಿಮ್ಮಿಂಗ್ ಲೀಗ್: ಉದ್ಘಾಟಿಸಿದ ದ್ರೋಣಾಚಾರ್ಯ ಪುರಸ್ಕೃತ ತರಬೇತುದಾರ ಶ್ರೀ ಪ್ರದೀಪ್ ಕುಮಾರ್

ಮಂಗಳೂರು: ಮಹಿಳಾ ಕ್ರೀಡಾಪಟುಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಹಾಗೂ ಮಹಿಳೆಯರಿಂದ ಕ್ರೀಡಾ ರಂಗಕ್ಕೆ ಹೆಚ್ಚಿನ ಕೊಡುಗೆ ಸಿಗುವಂತಾಗಬೇಕು ಎಂದು ದ್ರೋಣಾಚಾರ್ಯ ಪುರಸ್ಕೃತ, ಈಜು ಕ್ರೀಡೆಯಲ್ಲಿ ಹಲವಾರು ಒಲಂಪಿಯನ್ ಈಜು ಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ತರಬೇತುದಾರ ಶ್ರೀ ಪ್ರದೀಪ್ ಕುಮಾರ್ ಹೇಳಿದರು.


ಅವರು ಮಾರ್ಚ್ ಒಂದರಂದು ಮಂಗಳೂರಿನ ಎಮ್ಮೆಕೆರೆಯ ಸ್ಮಾರ್ಟ್ ಸಿಟಿ ಈಜುಕೊಳದಲ್ಲಿ ಜರುಗಿದ ಅಸ್ಮಿತ 2026 ಈಜು ಸ್ಪರ್ಧೆಯ ಲೀಗ್ ನ್ನು ಉದ್ಘಾಟಿಸಿದರು. ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಖೇಲೋ ಇಂಡಿಯಾ ಜಂಟಿಯಾಗಿ ಮಹಿಳೆಯರಿಗಾಗಿ ಆಯೋಜಿಸಿರುವ ಈಜು ಸ್ಪರ್ಧೆ ಕರ್ನಾಟಕದ 10 ಕೇಂದ್ರಗಳಲ್ಲಿ ಜರಗುತ್ತಾ ಇದೆ .


ಮಂಗಳೂರಿನಲ್ಲಿ ಜರುಗಿದ ಈ ಸ್ಪರ್ಧೆಯಲ್ಲಿ 9 ವರುಷ ದಿಂದ 14 ವಯೋಮಾನದ ಒಳಗಿನ ಸುಮಾರು 40ಕ್ಕೂ ಮಿಕ್ಕಿ ಬಾಲಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಈ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದ ರಾಷ್ಟ್ರೀಯ ತರಬೇತುದಾರರಾದ ಶ್ರೀ ನಟರಾಜ್ ಇವರು ಉಪಸ್ಥಿತರಿದ್ದರು ಸೆಂಟರ್ ನ ನಿರ್ದೇಶಕರಾದ ಶ್ರೀ ನವೀನ್, ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್ ಮುಖ್ಯ ತರಬೇತುದಾರರಾದ ಶ್ರೀ ರಾಮಕೃಷ್ಣರಾವ್, ವೀ ಒನ್ ಅಕ್ವಾ ಸೆಂಟರ್ ನ ಮುಖ್ಯ ತರಬೇತಿದಾರ ಶ್ರೀ ಲೋಕರಾಜ್ ವಿಟ್ಲ ಹಾಗೂ ಸೀ ಸಿಮ್ಮರ್ಸ್ ತಂಡದ ಮುಖ್ಯ ತರಬೇತಿದಾರ ಬಿಕೆ ನಾಯಕ್ ಉಪಸ್ಥಿತರಿದ್ದರು.


ಈ ಸ್ಪರ್ಧೆಯಲ್ಲಿ 16 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ವಿಜೇತರಿಗೆ ಪದಕ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿ ಗೌರವಿಸಲಾಯಿತು.

error: Content is protected !!