ಮಂಗಳೂರು: ಯಾವುದೇ ಸ್ವಾರ್ಥವಿಲ್ಲದೆ ದೇವರ ಮಡಿಲಿಗೆ ಇಲ್ಲವೆ ಹೆಣ್ಣಿನ ಮುಡಿಗೆ ಸೇರಿ ತನ್ನನ್ನು ತಾನು ಅಲ್ಪಾವದಿಯಲ್ಲೆ ಸಾರ್ಥಕಗೊಳಿಸುವ ಪುಷ್ಪದಂತೆ ನಮ್ಮ ಬಾಳು ಇರಬೇಕು. ಯಾರನ್ನು ನಿರಾಕರಿಸುವ ಯಾರಿಗೂ ನೋವು ಉಂಟು ಮಾಡದಿರುವ ಹೂವಿನಂತೆ ನಾವು ಬದುಕಬೇಕು, ಪ್ರತಿಯೊಬ್ಬ ವ್ಯಕ್ತಿಯೂ ಜೀವನಕ್ಕೊಂದು ಮೌಲ್ಯಯುತವಾದ ಸಿದ್ದಾಂತವನ್ನಿಟ್ಡುಕೊಂಡು ಬದುಕಿದಾಗ ಜೀವನದ ಪರಿಪೂರ್ಣತೆ ಸಾಧ್ಯವಾಗುತ್ತದೆ ಎಂದು ಮುಂಬಯಿ ವಿ.ಕೆ.ಸಮೂಹ ಸಂಸ್ಥೆಯ ಸಿ.ಎಂ.ಡಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ನುಡಿದರು.


ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಭಿವೃದ್ಧಿ ಯೋಜನೆ ಮತ್ತು ಶಾಶ್ವತ ದತ್ತಿನಿಧಿ ಸ್ಥಾಪಿಸುವ ಬಗ್ಗೆ ಮುಂಬಯಿ ಕುರ್ಲಾ ಬಂಟರ ಸಂಘದಲ್ಲಿ ನಡೆದ ಹಳೆ ವಿದ್ಯಾರ್ಥಿಗಳ, ದಾನಿಗಳ, ವಿದ್ಯಾಭಿಮಾನಿಗಳ ಸಮಾವೇಷದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ಉದಾರ ಮನಸ್ಸಿನ ಸೇವೆಗೆ ದೇವರ ಆಶೀರ್ವಾದ ಯಾವಾಗಲೂ ಇರುತ್ತದೆ ಶಾಲೆಯ ಶಾಶ್ವತ ನಿಧಿ ಯೋಜನೆಗೆ ತಮ್ಮೆಲ್ಲರ ಸಹಕಾರ ಇರಲಿ ಎಂದರು.

ಮುಂಬಯಿ ಅವಿನ್ಯೂ ಹೋಟೆಲ್ ಮಾಲಕರಾದ ರಘರಾಮ ಶೆಟ್ಟಿ ಬೋಳ,ಮುಂಬಯಿ ವಿನೀತ್ ಕೆಮಿಕಲ್ಸ್ ಸಂಸ್ಥೆಯ ಮಾಲಕರಾದ ವಿಶ್ವನಾಥ ಶೆಟ್ಟಿ ಹೊಸಬೆಟ್ಟು, ಮುಂಬಯಿ ಬಾಬ ಗ್ರೂಪ್ ನ ಸಿ.ಎಂ.ಡಿ ಮಹೇಶ್ ಶೆಟ್ಟಿ, ಸುರತ್ಕಲ್ ಚಾವಡಿ ಸಭಾಭವನದ ಮಾಲಕರಾದ ಡಿ.ಕೆ.ಶೆಟ್ಟಿ ಸೂರಿಂಜೆ, ಮುಂಬಯಿ ಉದ್ಯಮಿ ಜಗದೀಶ್ ಶೆಟ್ಟಿ,ಮುಂಬಯಿ ಉದ್ಯಮಿ ಗಣೇಶ್ ಶೆಟ್ಟಿ,ಜಯಂತ ದೇವಾಡಿಗ,ಪುಷ್ಪರಾಜ್ ವಿಠಲ ಶೆಟ್ಟಿ, ಸದಾಶಿವ ಶೆಟ್ಟಿ ಮುಂಡ್ಕೂರು,ಪುರಂದರ ಶೆಟ್ಟಿ ಮುಂಬಯಿ, ಸೌಮ್ಯ ಶೆಟ್ಟಿ ಸಂಕದಡಿ, ಜಯ ಶೆಟ್ಡಿ ಸಂಕದಡಿ, ಮಧ್ಯ ಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪ್ರಪುಲ್ಲ ಪಂಜ, ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಸದಸ್ಯರಾದ ವಜ್ರಾಕ್ಷಿ ಪಿ ಶೆಟ್ಟಿ, ಪ್ರಕಾಶ್ ಶೆಟ್ಟಿ, ಶಶಿಕಲಾ, ರಿತೇಶ್ ಶೆಟ್ಟಿ, ಕಿರಣ್ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಗುಣಪಾಲ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿದ ರಘರಾಮ ಶೆಟ್ಟಿ ಬೋಳ ಮತ್ತು ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಅವರನ್ನು ಸನ್ಮಾನಿಸಲಾಯಿತು.