ಸುರತ್ಕಲ್: ನಂದಿನಿ ಹಾಲು ಹಾಲಿನ ಉತ್ಪನ್ನಗಳು ಉತ್ಕೃಷ್ಟ ಮಟ್ಟದಿಂದ ಕೂಡಿದ್ದು ಉತ್ತಮ ಅರೋಗ್ಯ ಸಂರಕ್ಷಣೆಗೆ ವಿಶೇಷ ಸಹಕಾರಿಯಾಗಿದೆ ಎಂದು ಶಾಸಕ ಡಾ ವೈ ಭರತ್ ಶೆಟ್ಟಿ ನುಡಿದರು
ಅವರು ಮುಕ್ಕದಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯ ಹಾಗೂ ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಸಂಸ್ಥೆಯ ವತಿಯಿಂದ ನಂದಿನಿ ಕೆಫೆ ಮೂ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಅವಿಭಾಜ್ಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಂದಿನಿ ಮೂಡಿ ಬಂದಿದೆ ಎಂದರು.
ಕೆಎಂಎಫ್ ಸಂಸ್ಥೆಯ ಆಡಳಿತ ನಿರ್ದೇಶಕ ಬಿ.ಸಿ ಸತೀಶ್ ಮಾತನಾಡಿ ಗ್ರಾಹಕರು ಖರೀದಿಸುವ ನಂದಿನಿ ಉತ್ಪನ್ನದ ಪ್ರತಿ ಒಂದು ರೂಪಾಯಿಯಲ್ಲಿ ಎಂಬತ್ತು ಪೈಸೆ ರೃತರಿಗೆ ನೀಡುತ್ತಿದ್ದು ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಪೊರೈಕೆ ಮಾಡುತ್ತಿದ್ದ ಹಾಲು ರಾಜ್ಯದಲ್ಲಿ ಉತ್ಕøಷ್ಠ ಮಟ್ಟದ ಹಾಲು ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಮುಂದಿನ ದಿನಗಳಲ್ಲಿ ಮಂಗಳೂರು ಮಜ್ಜಿಗೆ, ರಾಗಿ ಮಾಲ್ಟ್, ಎಪಲ್ ಮಿಲ್ಕ್ ಶೇಖ್ ಸಹಿತ ಹತ್ತು ವಿನೂತನ ಉತ್ಪನ್ನಗಳು ಮಾರುಕಟ್ಟೆಗೆ ಬರಲಿದೆ ಎಂದರು. ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಸಂಸ್ಥೆಯ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಬಿ ಆಶೋಕ್, ಮನಪಾ ಸದಸ್ಯ ವರುಣ್ ಚೌಟ, ಶ್ವೇತ ಪೂಜಾರಿ, ಶೋಭಾ ರಾಜೇಶ್, ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಸಂಸ್ಥೆಯ ನಿತ್ಯನಂದ ಭಕ್ತ, ಉಪಾಧ್ಯಕ್ಷ ಜಯರಾಮ ರೈ, ಕಾಪು ದಿವಾಕರ ಶೆಟ್ಟಿ, ಕಮಲಕ್ಷ ಹೆಬ್ಬಾರ್, ಸುಧಾಕರ ಶೆಟ್ಟಿ, ನರಸಿಂಹ ಕಾಮತ್, ಬೋಳ ಸದಾಶಿವ ಶೆಟ್ಟಿ, ರಘನಂದನ್, ಮಾರುಕಟ್ಟೆ ವ್ಯವಸ್ಥಾಪಕ ನಿರ್ದೇಶಕ ಡಾ ರವಿರಾಜ್ ಉಡುಪ, ಅಧಿಕಾರಿ ಜಾನೇಟ್, ಸಂಸ್ಥೆಯ ಮಾಲಕ ಶಶಿಕಾಂತ್, ಎಂ .ರವಿ, ಗೋಪಾಲ್, ಆಭಿಶೇಕ್, ಸಚಿನ್, ಪ್ರಸನ್ನ ಬೈಲೂರು ಮುಂತಾದವರು ಉಪಸ್ಥಿತರಿದ್ದರು.