
ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ 88ನೇ ಸಂಸ್ಥಾಪನಾ ದಿನಾಚರಣೆಯನ್ನು ಮಂಗಳೂರಿನ ಕದ್ರಿಯಲ್ಲಿರುವ ಸುಜೀರ ಸಿ,ವಿ,ನಾಯಕ್ ಸಭಾಗೃಹದಲ್ಲಿ ಅಕ್ಟೋಬರ್ 10ನೇ ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರ ತನಕ ನಡೆಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ಡಾ.ಕಸ್ತೂರಿ ಮೋಹನ ಪೈ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಸಂಘದ ವತಿಯಿಂದ ಸುಜೀರ ಸಿ.ವಿ.ನಾಯಕ ಐತಿಹಾಸಿಕ ಕಲ್ಯಾಣ ಮಂಟಪವನ್ನು 1967ರಲ್ಲಿ ಸ್ಥಾಪಿಸಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕಡಿಮೆ ಖರ್ಚಿನಲ್ಲಿ 120 ಅಪಾರ್ಟಮೆಂಟ್ ಮನೆಗಳನ್ನು ರಚಿಸಿ ರೂ. 35000 ದಿಂದ 85000 ಬೆಲೆಯಲ್ಲಿ 120 ಕುಟುಂಬಗಳಿಗೆ ನೀಡಲಾಗಿದೆ.

ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ 5 ಲಕ್ಷಗಳಷ್ಟು ನೋಟ್ ಪುಸ್ತಕಗಳು, ಪಠ್ಯ ಪುಸ್ತಕಗಳು, ಇತರ ಪರಿಕರಗಳು. ಸುಮಾರು 5000 ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರಗಳನ್ನು ವಿತರಿಸಲಾಗಿದೆ.
1940ರಿಂದಲೇ ಧರ್ಮಾರ್ಥ ಹೊರರೋಗಿಗಳ ಚಿಕಿತ್ಸಾ ವಿಭಾಗವನ್ನು ತೆರೆದಿದ್ದು, ಸಮಾಜದ ನುರಿತ ವೈದ್ಯರು ಸೇವೆ ನೀಡಿದ್ದಾರೆ. ಇಂದಿನ ತನಕ ಸರಾಸರಿ ವಾರ್ಷಿಕವಾಗಿ ಸುಮಾರು ಒಂದು ಲಕ್ಷದಷ್ಟು ಖರ್ಚಿನಲ್ಲಿ 300 ಹಿರಿಯ ನಾಗರಿಕ ಹೊರರೋಗಿಗಳಿಗೆ ಅವರ ಮಾಸಿಕ ಔಷಧಗಳ ಸರಬರಾಜು ಆಗುತ್ತಿದೆ. ಸಂಸ್ಥಾಪನ ದಿವಸದಂದು ಹತ್ತನೇಯ ತರಗತಿಯಿಂದ ಸ್ನಾತಕೋತ್ತರ ಪದವಿಯ ತನಕ ಸಾಧನೆಗೈದ 150 ವಿದ್ಯಾರ್ಥಿಗಳಿಗೆ ‘ಶೈಕ್ಷಣಿಕ ಉತ್ಕೃಷ್ಟತಾ ಸಾಧನೆ’ಯ ಪುರಸ್ಕಾರ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಕ್ಷಮತೆಯನ್ನು ಗೈದವರಿಗೆ ಸನ್ಮಾನ ಮಾಡಲಾಗುವುದು ಎಂದರು.

ಹೆಚ್ಚಿನ ವಿವರಗಳಿಗೆ email:gsbsevasangh@gmail.com ಮೂಲಕ ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಶಾಂಭವಿ ಪ್ರಭು, ಮಂಗಳಾ ಭಟ್,ಎಮ್. ರಾಧಾಕೃಷ್ಣ ಕಾಮತ್, ಡಾ.ಎ. ರಮೇಶ ಪೈ, ವೆಂಕಟೇಶ ಎನ್ ಬಾಳಿಗಾ ಮತ್ತಿತರರು ಉಪಸ್ಥಿತರಿದ್ದರು.