ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಜತೆ ಕೆನರಾ ಇಂಜಿನಿಯರಿಂಗ್ ಶೈಕ್ಷಣಿಕ ಹಾಗೂ ಸಂಶೋಧನೆ ಒಪ್ಪಂದ

ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಜತೆ ಶೈಕ್ಷಣಿಕ ಹಾಗೂ ಸಂಶೋಧನಾ
ಒಪ್ಪಂದ ಮಾಡಿಕೊಂಡಿದೆ. ಶೈಕ್ಷಣಿಕ ಮತ್ತು ಕೃಷಿ ಸಹಭಾಗಿತ್ವದ ಮೂಲಕ ಸಂಶೋಧನೆ, ಕೌಶಲ ಅಭಿವೃದ್ಧಿ ಮತ್ತು ಸಾವಯವ ಕೃಷಿ ಅಭಿವೃದ್ಧಿಗಾಗಿ ಬಯೋಟೆಕ್ ಕಿಸಾನ್ ಇದರ ಅನುಷ್ಠಾನಕ್ಕಾಗಿ ಪರಸ್ಪರ ಕೊಡುಗೆ ಸಲ್ಲಿಸಲು ಈ ಒಪ್ಪಂದ ಸಹಕಾರಿಯಾಗಲಿದೆ.
ಕೃಷಿಯಲ್ಲಿ ನಿಖರತೆ, ಐಒಟಿ, ವಿದ್ಯಾರ್ಥಿಗಳ ಇಂಟರ್ನ್ ಶಿಪ್ ಗಳು, ಆಂತರ್ ಶಿಸ್ತಿನ ಕಾರ್ಯ ಯೋಜನೆಗಳು, ಬೋಧಕರ ಕೌಶಲ ಅಭಿವೃದ್ಧಿ, ರೈತರಿಗೆ ತರಬೇತಿ, ಗ್ರಾಮೀಣ ಜನತೆಯೊಂದಿಗೆ ಸ್ಪಂದನ, ನಾವೀನ್ಯತೆಗೆ ಒತ್ತು, ಕೃಷಿ ವಲಯದಲ್ಲಿ ಸಕಾರಾತ್ಮಕ ಪರಿಣಾಮಗಳ ಕುರಿತು ಸಹ ಈ ಒಪ್ಪಂದವು ನೆರವಾಗಲಿದೆ.

ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಗ್ನಾನೇಶ್ ಬಿ.ಎನ್, ಕೆನರಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಮತ್ತು ಡೀನ್ ಅಕಾಡಮಿಕ್ಸ್ ಡಾ. ಡೇಮಿಯನ್ ಆಂಟನಿ ಡಿಮೆಲ್ಲೋ, ಪ್ಲೇಸ್ ಮೆಂಟ್ ಟ್ರೈನಿಂಗ್ ಆಂಡ್ ಕೊಲಾಬರೇಶನ್ ಡೀನ್ ಡಾ. ಹೆಚ್. ಮನೋಜ್ ಟಿ. ಗಡಿಯಾರ್, ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಡೀನ್ ಡಾ.ಉದಯ ಕುಮಾರ್ ಕೆ. ಶೆಣೈ ಹಾಗೂ ಚೀಫ್ ಆರ್ ಎನ್.ಡಿ. ಕೊರ್ಡಿನೇಟರ್ ಡಾ. ಅಭಿಷೇಕ್ ಎಸ್. ರಾವ್ ಉಪಸ್ಥಿತರಿದ್ದರು.

error: Content is protected !!