“ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆ ಬೆಳೆಸುವಲ್ಲಿ ಸಾರ್ವಜನಿಕ ಉತ್ಸವಗಳ ಪಾತ್ರ ಮಹತ್ವದ್ದು“ -ಡಾ.ಭರತ್ ವೈ.ಶೆಟ್ಟಿ

ಸುರತ್ಕಲ್: ಸಮಾಜದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಸಹಬಾಳ್ವೆ ಬೆಳೆಸುವಲ್ಲಿ ಇಂತಹ ಸಾರ್ವಜನಿಕ ಉತ್ಸವಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭರತ್ ವೖ ಶೆಟ್ಟಿ ನುಡಿದರು.

ಅವರು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಗಣೇಶಪುರ ಹಾಗೂ ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ವತಿಯಿಂದ ಗಣೇಶಪುರ ಮಹಾಗಣಪತಿ ದೇವಸ್ಥಾನದ ಮೖಧಾನದಲ್ಲಿ 24 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗ ಕಾರ್ಯನಿರ್ವಾಹಕ ಹರಿಕೃಷ್ಣ ಮಾತನಾಡಿದರು,ಉದ್ಯಮಿ ಪ್ರಧ್ಯುಮ್ನ ರಾವ್ ಶಿಬರೂರು,ದಕ್ಷಿಣ ಕನ್ನಡ ಜಿಲ್ಲಾ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಅಧ್ಯಕ್ಷ ಗಣೇಶ್ ಪುದ್ವಾಲ್, ಮಂಗಳೂರು ಜ್ಯೋತಿಷರಾದ ಶಶಿ ಪಂಡಿತ್, ಸುರತ್ಕಲ್ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವಿವೇಕ್ ಅಚಾರ್ಯ, ಮಂಗಳೂರು ನ್ಯೂ ರೋಡ್ ಲೃನ್ ಮಾಲಕರಾದ ಅಶೋಕ್ ಕುಮಾರ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಸುರತ್ಕಲ್ ಮಹಿಳಾ ವಿಭಾಗದ ಬಂಟರ ಸಂಘದ ಅಧ್ಯಕ್ಷೆ ಸರೋಜ ಶೆಟ್ಟಿ,ಮಂಗಳೂರು ಉತ್ತರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ ಚಂದ್ರಶೇಖರ ಅಚಾರ್ಯ, ವಕೀಲರಾದ ಸದಾಶಿವ ಐತಾಳ್ ಕೃಷ್ಣಾಪುರ, ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಯಕುಮಾರ್, ಮನಪಾ ಮಾಜಿ ಸದಸ್ಯ ಲೋಕೇಶ್ ಬೊಳ್ಳಾಜೆ, ಮನೋಹರ್ ಶೆಟ್ಟಿ ಸೂರಿಂಜೆ, ಜಯಪ್ರಕಾಶ್ ಸೂರಿಂಜೆ, ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ, ಕೋಶಾಧಿಕಾರಿ ಭಾಸ್ಕರ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘಧ ಅಧ್ಯಕ್ಷ ಅಶೋಕ್ ಶೆಟ್ಟಿ ವಹಿಸಿದ್ದರು ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಹರೀಶ್ ಮುಡಾಯಿಕೋಡಿ ಸ್ವಾಗತಿಸಿ ನಾಗರಾಜ್ ಶೆಟ್ಟಿಗಾರ್ ಮಂಗಳಪೇಟೆ ಧನ್ಯವಾದ ಸಮರ್ಪಿಸಿ ಅಶೋಕ್ ಕೖಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು ಇದೆ ಸಂಧರ್ಭದಲ್ಲಿ ಅರ್ಥಿಕವಾಗಿ ಹಿಂದುಳಿದ ಅರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧ ಪಟ್ಟ ಫಲಾನುಭವಿಗಳಿಗೆ ಸಹಾಯ ಧನ ವಿತರಿಸಲಾಯಿತು.

Advt
error: Content is protected !!