HPV ಲಸಿಕೆ ಕುರಿತು ಜಾಗೃತಿ ಕಾರ್ಯಕ್ರಮ

​ಕೆನರಾ ಹೈಸ್ಕೂಲ್ ಸಿಬಿಎಸ್‌ಇ ಶಾಲೆಯ ಇಂಟರಾಕ್ಟ್ ಕ್ಲಬ್ ಹಾಗೂ ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಇವುಗಳ ಜಂಟಿ ಆಶ್ರಯದಲ್ಲಿ 14-07-2026 ರಂದು ಭುವನೇಂದ್ರ ಸಭಾ ಭವನದಲ್ಲಿ ‘HPV ಲಸಿಕೆ’ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಂಗಳೂರು ​ಬಂದರ್‌ ವಲಯದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರಾದ ಡಾ. ಗಣೇಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, HPV ಲಸಿಕೆಯ ಮಹತ್ವದ ಬಗ್ಗೆ ಮಾತನಾಡಿದರು.
​ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ. ಸಿಂಚನಾ ಭಟ್ ಅವರು HPV ಲಸಿಕೆಯ ಪ್ರಾಮುಖ್ಯತೆ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಯ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
​ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಅಧ್ಯಕ್ಷರಾದ ಶ್ರೀ ಶ್ಯಾಮ್ ಪ್ರಕಾಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿನಿಯರು ಆರೋಗ್ಯ ಮುನ್ನೆಚ್ಚರಿಕೆಯ ಬಗ್ಗೆ ಕಾಳಜಿ ವಹಿಸಬೇಕೆಂದು ಕರೆ ನೀಡಿದರು.
​ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಬಂದರ್ ವಲಯದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರುಗಳಾದ ಶ್ರೀ ಪ್ರದೀಪ್, ಶ್ರೀ ಗಣೇಶ್ ಮತ್ತು ಡಾ. ಸೌಭಾಗ್ಯ, ರೋಟರಿ ಕ್ಲಬ್ ನ ಇತರ ಸದಸ್ಯರು, ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


​ಒಟ್ಟಾರೆಯಾಗಿ ಈ ಕಾರ್ಯಕ್ರಮವು ಅತ್ಯಂತ ಉಪಯುಕ್ತವಾಗಿದ್ದು ವಿದ್ಯಾರ್ಥಿಗಳಿಗೂ, ಪೋಷಕರಿಗೂ ಸ್ಪಷ್ಟ ಮಾಹಿತಿ ದೊರಕುವಲ್ಲಿ ಸಹಕಾರಿಯಾಗಿದೆ. ಸಂಪೂರ್ಣ ಕಾರ್ಯಕ್ರಮವು ಸಂವಾದಾತ್ಮಕವಾಗಿ ಮೂಡಿಬಂದಿತು.

error: Content is protected !!