
ಸುರತ್ಕಲ್: ಕ್ರೀಡೆ ಮನಸ್ಸು ಮತ್ತು ದೇಹವನ್ನು ಹತೋಟಿಯಲ್ಲಿಡುತ್ತದೆ, ಕ್ರೀಡೆಯಲ್ಲಿ ಹೊರಾಂಗಣ ಮತ್ತು ಒಳಾಂಗಣ ಎಂಬ ಎರಡು ರೀತಿಯ ಕ್ರೀಡೆ ಇದ್ದು ಕ್ರೀಡಾಳುಗಳಿಗೆ ಕ್ರೀಡಾ ಮನೋಭಾವನೆ ಬೇಕು ಎಂದು ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ನುಡಿದರು.
ಅವರು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸರಕಾರಿ ಪದವಿ ಪೂರ್ವ ಕಾಲೇಜು ಚೇಳೃರುವಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಮುಲ್ಕಿ ತಾಲೂಕು ಮಟ್ಟದ ಖೋಖೋ ಪಂದ್ಯಾಟವನ್ನು ಉಧ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಬೆಂಗಳೂರು ಪರ್ವತಾರೋಹಿ ಅರವಿಂದ ಕಿಗ್ಗ, ಚೇಳೃರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯಾನಂದ ಚೇಳೃರು, ಪುಷ್ಪರಾಜ್ ಶೆಟ್ಟಿ ಮಧ್ಯ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೆಂಕಟೇಶ್ ಶೆಟ್ಟಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಚೇಳೃರು ಮಧ್ಯ ಕೊಡಿಪಾಡಿ ಅಧ್ಯಕ್ಷ ದಿಲೀಪ್ ಮುಂಚೂರು, ರಮೇಶ್ ಪೂಜಾರಿ ಚೇಳೃರು, ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಚಂದ್ರಶೇಖರ ಹೆಬ್ಬಾರ್, ರಾಷ್ಟ್ರೀಯ ಕ್ರೀಡಾ ಪಟು ಭವಿಷ್ ಶೆಟ್ಟಿ ಚೇಳೃರು, ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಜಯಾನಂದ ಸುವರ್ಣ, ಜತೆ ಕಾರ್ಯದರ್ಶಿ ವಿಠಲ್ ಎ, ಉದ್ಯಮಿ ಹರ್ಷೆಂದ್ರ ಕುಮಾರ್ ನೂರಳ್ ಬೆಟ್ಟು, ಮೂಲ್ಕಿ ತಾಲೂಕು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಅನಿಲ್ ವಿ ಚೆರಿಯಾನ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಶೋಕ್, ಚೇಳೃರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ಚೇಳೃರು ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಸೂರ್ಯಕಾಂತ್ ಕೊಲ್ಯ, ಹಂಪನಕಟ್ಟೆ ಪದವಿ ಪೂರ್ವ ಕಾಲೇಜು ಪ್ರಾದ್ಯಾಪಕಿ ಮಲ್ಲಿಕಾ, ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ!ಜ್ಯೋತಿ ಚೇಳೃರು ವಹಿಸಿದ್ದರು ಕಾಲೇಜಿನ ಪ್ರಾದ್ಯಾಪಕಿ ಶೋಭಾ ಶರ್ಮ ಸ್ವಾಗತಿಸಿ ಪ್ರಾಧ್ಯಾಪಕ ಚಂದ್ರನಾಥ್ ಕಾರ್ಯಕ್ರಮ ನಿರೂಪಿಸಿದರು ಖೋಖೋ ಹುಡುಗರ ವಿಭಾಗದಲ್ಲಿ ಪ್ರಥಮ ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು ಕಟೀಲು, ದ್ವಿತೀಯ ನಿರಂಜನ ಪದವಿ ಪೂರ್ವ ಕಾಲೇಜು ಸುಂಕದಕಟ್ಟೆ, ತ್ರತೀಯ ಪದವಿ ಪೂರ್ವ ಕಾಲೇಜು ಮುತ್ತೂರು, ಚತುರ್ಥ ರೋಸರಿ ಪದವಿ ಪೂರ್ವ ಕಾಲೇಜು ಕಿನ್ನಿಕಂಬಳ ಹುಡುಗಿಯರ ವಿಭಾಗದಲ್ಲಿ ಪ್ರಥಮ ಶ್ರೀ ದುರ್ಗಾ ಪರಮೇಶ್ವರಿ ಪದವಿ ಪೂರ್ವ ಕಾಲೇಜು ಕಟೀಲು ದ್ವಿತೀಯ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜು ಸುಂಕದಕಟ್ಟೆ ತ್ರತೀಯ ಪದವಿ ಪೂರ್ವ ಕಾಲೇಜು ಮುತ್ತೂರು, ಚತುರ್ಥ ಪದವಿ ಪೂರ್ವ ಕಾಲೇಜು ಚೇಳೃರು ಜಯ ಗಳಿಸಿದ್ದಾರೆ