
ಮಂಗಳೂರು: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ದೆಹಲಿ ಪೋಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ಸೂಚನೆಯ ಮೇರೆಗೆ ಬಂಧನವನ್ನು ಖಂಡಿಸಿ ಮಂಗಳೂರು ಲಾಲ್ ಬಾಗ್ ನಲ್ಲಿರುವ ನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಠಾತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜಾ, ಪದ್ಮರಾಜ್ ಪೂಜಾರಿ, ಮಿಥುನ್ ರೈ, ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಇಬ್ರಾಹಿಂ ನವಾಜ್, ಎಸ್ ಅಪ್ಪಿ, ದಿನೇಶ್ ಮುಳೂರು, ಭಾಸ್ಕರ್ ಕೆ, ಡೇನಿಸ್ ಡಿ ಸಿಲ್ವ, ನವೀನ್ ಡಿ ಸೋಜಾ, ಸೌಹಾನ್ ಆಳ್ವಾ, ವಾಹಬ್ ಕುದ್ರೋಳಿ, ಅಮೃತ್ ಕದ್ರಿ, ನಮಿತಾ ಡಿ ರಾವ್, ನಿರಾಜ್ ಚಂದ್ರಪಾಲ್, ಸಮರ್ಥ್ ಭಟ್, ಶಾಂತಲಾ ಗಟ್ಟಿ, ಚೇತನ್ ಉರ್ವ, ಪ್ರವೀಣ್ ಆಳ್ವಾ, ಏ. ಸಿ ವಿನಾಯರಾಜ್, ಅಶ್ರಫ್, ಅನಿಲ್ ಪೂಜಾರಿ, ವಿಕಾಸ್ ಶೆಟ್ಟಿ, ಅಳಿಸ್ಟರ್ ಡಿ ಕುನ್ನಾ, ತೌಸೀಫ್ ಉಪ್ಪಿನಂಗಡಿ, ಸಾರಿಕಾ ಪೂಜಾರಿ, ವೀಣಾ ಮೊದಲದವರು ಉಪಸ್ಥಿತರಿದ್ದರು.


