
ಮಂಗಳೂರು: ವಿಟ್ಲ ಠಾಣಾ ವ್ಯಾಪ್ತಿಯ ನಿವಾಸಿ ಹಾಗೂ ಪ್ರಕರಣದ ಪಿರ್ಯಾದಿಯಾದ ಸಂತ್ರಸ್ಥ ಬಾಲಕನ ದೂರಿನಂತೆ ಬಾಲಕನಿಗೆ 2026ನೇ ಸಾಲಿನ ಫೆಬ್ರವರಿ ತಿಂಗಳಿನಿಂದ ಅಗಸ್ಟ್ ತಿಂಗಳಿನ ಅವಧಿಯಲ್ಲಿ ಆರೋಪಿಗಳಾದ ಜವಾದ್, ಶಾಹಿದ್, ರಿಯಾಝ್ @ ಅಬ್ದುಲ್ ಗಫೂರ್ ಹಾಗೂ ಇತರ ಮೂವರು ಲೈಂಗಿಕ ದೌರ್ಜನ್ಯವಸಗಿರುತ್ತಾರೆ ಎಂಬುದಾಗಿ ದಿನಾಂಕ:04-09-2026 ರಂದು ದೂರು ನೀಡಿದ್ದು, ಸದ್ರಿ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ
ಅ.ಕ್ರ: 185/2026, 186/2026, 187/2026, 188/2026, 189/2026 ಹಾಗೂ 190/2026, ಕಲಂ: 4(2), 5(m), 6, 8 ಪೋಕ್ಸೋ ಕಾಯ್ದೆ 2012 ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ.
ಸದ್ರಿ ಪ್ರಕರಣಗಳ ತನಿಖೆ ನಡೆಸಲಾಗಿ ಆರೋಪಿತರ ಪೈಕಿ ಜವಾದ್, ಶಹೀದ್ ಹಾಗೂ ರಿಯಾಝ್ @ ಅಬ್ದುಲ್ ಗಫೂರ್ ಎಂಬವರುಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
