ಮಂಗಳೂರು: ದರೋಡೆಕೋರರು ಕೊಂಡೊಯ್ದಿದ್ದ ಕಾರ್ ಪತ್ತೆ!

ಸುರತ್ಕಲ್: ಸೋಮವಾರ ನಸುಕಿನ ಜಾವ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಬೈಕಂಪಾಡಿ ಎಂಬಲ್ಲಿ ನಡೆದಿದ್ದ ಕೇರಳ ಮೂಲದ ಉದ್ಯಮಿಯ ಕಾರ್ ಮತ್ತು ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ದರೋಡೆಕೋರರು ಕೊಂಡೊಯ್ದಿದ್ದ ಕಾರು ಕಲ್ಪನೆ ಬಳಿ ಪತ್ತೆಯಾಗಿದೆ.


ಕಾರಿನ ಎಲ್ಲಾ ಸೀಟ್‌ ಗಳನ್ನು ಹರಿದು ಹಾಕಲಾಗಿದ್ದು ದರೋಡೆಕೋರರು ಚಿನ್ನಕ್ಕಾಗಿ ಹುಡುಕಾಟ ನಡೆಸಿರುವುದು ಕಂಡುಬಂದಿದೆ. ದರೋಡೆಕೋರರ ಪತ್ತೆಗಾಗಿ ವಿಶೇಷ ಪೊಲೀಸ್‌ ತಂಡಗಳನ್ನು ರಚಿಸಲಾಗಿದ್ದು ಎಲ್ಲಾ ಕಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಣಂಬೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!