ಸುರತ್ಕಲ್: ಪ್ರೀತಿ ಪ್ರೇಮದ ನಾಟಕವಾಡಿದ ಯುವಕ ಕೈಕೊಟ್ಟ ಕಾರಣ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುರತ್ಕಲ್ ಪೊಲೀಸರು ಬಜ್ಪೆ ಕೈಕಂಬ ಸಮೀಪದ ಗಂಜಿಮಠ ನಿವಾಸಿ ಅನೀಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂದಿದ್ದು ಆತ ಪರಾರಿಯಾಗಿರುವ ಮಾಹಿತಿ ಲಭಿಸಿದೆ.
ಘಟನೆಯ ವಿವರ:
ಬಾಲಕಿಗೆ ಬಜ್ಪೆ ನಿವಾಸಿ ಅನೀಶ್ ಪರಿಚಯವಾಗಿದ್ದು ಪರಿಚಯ ಪ್ರೀತಿ ಪ್ರೇಮದ ಗಡಿದಾಟಿ ಬೇರೆ ಹಂತಕ್ಕೆ ತಿರುಗಿತ್ತು ಎನ್ನಲಾಗಿದೆ. ಈ ವಿಷಯ ಬಾಲಕಿಗೆ ತಿಳಿದು ಯುವಕನಲ್ಲಿ ಮದುವೆಯಾಗುವಂತೆ ಕೇಳಿಕೊಂಡಿದ್ದು ಆತ ನಿರಾಕರಿಸಿದ್ದ. ಕೊನೆಗೆ ದಾರಿ ಕಾಣದೆ ತಾಯಿಗೆ ಎಲ್ಲಾ ವಿಚಾರವನ್ನು ತಿಳಿಸಿದ್ದು ಆಕೆ ಸಮಾಧಾನ ಪಡಿಸಿದ್ದರು ಎನ್ನಲಾಗಿದೆ.
ನಿನ್ನೆ ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ತಾಯಿ ಹಿಂದಿರುಗಿ ಮನೆಗೆ ಬಂದಾಗ ಮಗಳು ಮನೆಯ ಬೆಡ್ ರೂಮಿನ ಕೋಣೆಯ ಸೀಲಿಂಗ್ ಫ್ಯಾನ್ ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಗಿ ಸುರತ್ಕಲ್ ಪೊಲೀಸರಿಗೆ ದೂರು ನೀಡಲಾಗಿದೆ. ಅದರಂತೆ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಿದ್ದಾರೆ.