
ಸುರತ್ಕಲ್: ಇಂದಿನ ವಿದ್ಯಾರ್ಥಿಗಳು ಭಾರತ ದೇಶದ ಭವಿಷ್ಯ ರೂಪಿಸುವವರಾಗಿದ್ದಾರೆ ಕಷ್ಟ ಪರಿಶ್ರಮ ಪಟ್ಟರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಎಂ,ಅರ್,ಪಿ,ಎಲ್ ಸಂಸ್ಥೆಯ ಎಚ್ ಅರ್ ವಿಭಾಗದ ಗ್ರೂಪ್ ಜನರಲ್ ಮ್ಯಾನೇಜರ್ ಪ್ರಶಾಂತ್ ಪಡುವಾಲ್ ನುಡಿದರು.

ಅವರು ಎಂ,ಅರ್,ಪಿ,ಎಲ್ ಕರ್ಮಚಾರಿ ಸಂಘದ ವತಿಯಿಂದ ಶಾರದ ಭಜನಾ ಮಂದಿರ ಮಂಗಳಪೇಟೆಯಲ್ಲಿ ನಡೆದ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯದಿಕ ಅಂಕ ಗಳಿಸಿದ ಎಂ,ಅರ್,ಪಿ,ಎಲ್ ಸಂಸ್ಥೆಯಲ್ಲಿ ದುಡಿಯುತ್ತಿರುವ ಕಾರ್ಮಿಕರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ವಿದ್ಯಾರ್ಥಿಗಳು ವಿದ್ಯೆಗೆ ಮಹತ್ವ ಕೊಟ್ಟು ಹೆಚ್ಚು ಅಂಕ ಗಳಿಸಿ ತಮ್ಮ ಹೆತ್ತವರಿಗೆ ಊರಿಗೆ ಹೆಸರನ್ನು ತರುವ ಕೆಲಸ ಮಾಡಬೇಕು ನಮ್ಮ ಸಂಸ್ಥೆಯು ಶಿಕ್ಷಣ ಮತ್ತು ಅರೋಗ್ಯಕ್ಕೆ ಬಹಳ ಮಹತ್ವ ನೀಡುತ್ತಿದೆ ಎಂದರು ವೇದಿಕೆಯಲ್ಲಿ ಎಂ,ಅರ್,ಪಿ,ಎಲ್ ಮೆಕನಿಕಲ್ ವಿಭಾಗದ ಸಿ.ಜಿ.ಎಂ ಕಿರಣ್, ಎಂ,ಅರ್,ಪಿ,ಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ, ಉಪಾಧ್ಯಕ್ಷ ಸತೀಶ್ ಮಂಗಳಪೇಟೆ, ಉದ್ಯಮಿ ಪ್ರಶಾಂತ್ ಮುಡಾಯಿಕೋಡಿ, ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್, ಉಪಾಧ್ಯಕ್ಷ ಸುರೇಶ್ ಪೊಸ್ರಲ್, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್, ಜೊತೆ ಕಾರ್ಯದರ್ಶಿ ಸುನೀಲ್ ಬೋಳ, ಸುರೇಶ್ ಪೂಜಾರಿ ಕೃಷ್ಣಾಪುರ, ಕೋಶಾಧಿಕಾರಿ ಪುರುಷೋತ್ತಮ, ಎಸ್ ಸಿ ಎಸ್ ಟಿ ಯೂನಿಯನ್ ವಿಭಾಗದ ಅಧ್ಯಕ್ಷ ಸಂತೋಷ್, ಸಂಧ್ಯಾ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 33 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಎಂ,ಅರ್,ಪಿ,ಎಲ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಯಿತು.