ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ವಿಭಾಗದಿಂದ ಸಸಿಹಿತ್ಲು ಹಿಂದು ರುಧ್ರಭೂಮಿಗೆ ಕೊಡುಗೆ

ಸಸಿಹಿತ್ಲು: ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ವಿಭಾಗದಿಂದ ಸಸಿಹಿತ್ಲು ಹಿಂದು ರುಧ್ರಭೂಮಿಗೆ ಸುಮಾರು 151000 ವೆಚ್ಚದಲ್ಲಿ ಸಿಲಿಕಾನ್ ಒದಗಿಸಲಾಯಿತು. ಅದರ ಮಂಜೂರಾತಿ ಪತ್ರವನ್ನು ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಬಜಪೆ ಯೋಜನಾಧಿಕಾರಿ ಗಿರೀಶ್ ಹಸ್ತಾಂತರ ಮಾಡಿದರು.

ಯೋಜನೆಯ ಮುಲ್ಕಿ ವಲಯಾಧ್ಯಕ್ಷ ಪುಷ್ಷರಾಜ್ ಶೆಟ್ಟಿ ಮಧ್ಯ, ಮೇಲ್ವಚಾರಕಿ ನಿಶ್ಮಿತಾ ಶೆಟ್ಟಿ, ಹಳೆಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪೂರ್ಣಿಮ,ಒಕ್ಕೂಟದ ಪದಾಧಿಕಾರಿಗಳಾದ ಗುಣವತಿ,ಮಾಲಾ ಕಿರಣ್, ಸೇವಾ ಪ್ರತಿನಿಧಿ ಮೋಹಿನಿ, ಹಿಂದು ರುದ್ರಭೂಮಿ ಸಮಿತಿ ಅಧ್ಯಕ್ಷ ಎಸ್ ದಯಾನಂದ, ಕಾರ್ಯದರ್ಶಿ ಚಂದ್ರ ಲಚ್ಚಿಲ್ ಸಸಿಹಿತ್ಲು, ಕೋಶಾಧಿಕಾರಿ ಅಶೋಕ್ ಬಂಗೇರ, ಸದಸ್ಯರಾದ ದಿನೇಶ್ ಶೆಟ್ಟಿಗಾರ್, ಸೂರ್ಯಕಾಂಚನ್, ಅನಿಲ್ ಕುಮಾರ್, ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!