ಜೂ.20-21: ಮಂಗಳೂರು ಕದ್ರಿ ಕಂಬಳದಲ್ಲಿ ಮಾವು-ಹಲಸು ಮೇಳ

ಮಂಗಳೂರು: ಕಲ್ಕೂರ ಪ್ರತಿಷ್ಠಾನ, ಮಂಗಳೂರು, ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಸಮೃದ್ಧ ಫಲಗಳಾದ ಮಾವು – ಹಲಸು ಮೇಳ ಜೂನ್, 20 ಶನಿವಾರ ಹಾಗೂ 21 ಆದಿತ್ಯವಾರದಂದು ಎರಡು ದಿನಗಳ ಕಾಲ ಮುಂಜಾನೆ 7ರಿಂದ ಸಂಜೆ 7ರ ವರೆಗೆ ಕದ್ರಿ ಕಂಬಳ, ಮಲ್ಲಿಕಾ ಬಡಾವಣೆಯಲ್ಲಿರುವ “ಮಂಜು ಪ್ರಾಸಾದ’ದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ನಾಡು ನುಡಿ ಜಾಗೃತಿ ಸಮ್ಮೇಳನ ಸರಣಿ ಕಾರ್ಯಕ್ರಮದ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಮೇಳದಲ್ಲಿ ಬೆಳೆಗಾರರಿಗೆ ಮತ್ತು ಗ್ರಾಹಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.
ಆರಂಭದ ದಿನ ಸಭಾಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಶ್ರೀ ಶ್ರೀ ಜಿತಕಾಮಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲನೆ ಮಾಡಲಿರುವರು. ಡಾ| ಎಂ.ಬಿ. ಪುರಾಣಿಕ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ. ಜೀವರಾಜ ಸೊರಕೆಯವರು ಉದ್ಘಾಟನೆ ಮಾಡಲಿದ್ದು, ಶಾಸಕರಾದ ಡಿ. ವೇದವ್ಯಾಸ ಕಾಮತ್ ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಿರುವರು.


ಎರಡನೇ ದಿನದ ಕಾರ್ಯಕ್ರಮದ ಅಂಗವಾಗಿ ಯೋಗ ಸಾವಯವ ಆಹಾರ ಆರೋಗ್ಯ ಭಾಗ್ಯ ಶಿರ್ಷಿಕೆಯೊಂದಿಗೆ ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಯೋಗ ಸಾವಯವ ಆಹಾರ ಜಾಗೃತ ಸಂದೇಶ ನೀಡಲಿರುವರು. ಹಲಸು ಮಾವು ಆಹಾರ ಸೇವನೆ ವೈಜ್ಞಾನಿಕ ವಿಶ್ಲೇಷಣೆ ಉಪನ್ಯಾಸನವನ್ನು ಪಡುಬಿದ್ರೆಯ ಆಯುರ್ವೇದ ವೈದ್ಯ, ಪಾರಂಪರಿಕ ನಾಟಿ ತಜ್ಞರಾದ ಡಾ. ಎನ್. ಟಿ. ಅಂಚನ್ ನೀಡಲಿರುವರು.
ಆರೋಗ್ಯ ಸಚಿವರಾದ ಯು. ಟಿ. ಖಾದರ್, ಮಂಗಳೂರಿನ ಸಂಸದರಾದ ಕ್ಯಾ| ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಶಾಸಕರಾದ ಡಾ| ವೈ. ಭರತ್ ಶೆಟ್ಟಿ, ಸ್ವದೇಶಿ ಗೋವುಗಳ ಹಾಗೂ ಪ್ರಾದೇಶಿಕ ಸಸ್ಯಗಳ ತಳಿ ಸಂರಕ್ಷರು, ಪರಿಸರ ತಜ್ಞರಾದ ಡಾ। ಮನೋಹರ್ ಉಪಾಧ್ಯಾಯ, ಸಾವಯವ ಕೃಷಿಕ ಬಳಗದ ಅಧ್ಯಕ್ಷರಾದ ಜಿ. ಆರ್. ಪ್ರಸಾದ್, ಶಕೀಲಾ ಖಾವ, ಮನೋಹರ್ ಶೆಟ್ಟಿ ಇದ್ದು ಪ್ರಧಾನ ಅಭ್ಯಾಗತರಾಗಿ ಡಾ| ಎ.ಜೆ. ಶೆಟ್ಟಿ, ಡಾ| ಹರಿಕೃಷ್ಣ ಪುನರೂರು, ರಘುನಾಥ ಸೋಮಯಾಜಿ, ಪ್ರಕಾಶ್ ಕಲ್ಯಾವಿ, ಜಿತೇಂದ್ರ ಕೊಟ್ಟಾರಿ, ಎಂ.ಎಸ್. ಗುರುರಾಜ್, ಡಾ. ಎಂ. ಪಿ. ಶ್ರೀನಾಥ್, ನೀಲಾವರ ಸುರೇಂದ್ರ ಅಡಿಗ, ಡಾ. ಜಯಪ್ರಕಾಶ ತೊಟ್ಟೆತ್ತೋಡಿ, ಶಶಿಧರ ಹೆಗಡೆ, ಭಾಸ್ಕರ ಮೊಲಿ, ಕ್ಯಾ. ಗಣೇಶ್ ಕಾರ್ಣಿಕ್, ರತ್ನಾಕರ ಜೈನ್, ಎ.ಆ‌ರ್. ಸುಬ್ಬಯ್ಯಕಟ್ಟೆ, ಶ್ರೀನಿವಾಸ್‌ ನಾಯಕ್, ಪಿ.ಬಿ. ಹರೀಶ್ ರೈ, ಪುಷ್ಪರಾಜ್ ಶೆಟ್ಟಿ, ಮಿಥುನ್ ರೈ, ಜಯಾನಂದ ಅಂಚನ್‌, ಸುಧೀರ್ ಶೆಟ್ಟಿ ಕಣ್ಣೂರ್, ಮನೋಜ್ ಕುಮಾರ್, ಪ್ರೇಮಾನಂದ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿರುವರು.

ರಾಮನಗರ, ಮಂಡ್ಯ, ಮೈಸೂರು, ಬೆಳಗಾಂ ಹಾಗೂ ಸ್ಥಳೀಯ ಸ್ಥಳೀಯ ಕೃಷಿಕರು ಭಾಗವಹಿಸುತ್ತಿದ್ದು, ವಿವಿಧ ತಳಿಯ ಹಲಸು ರುದ್ರಾಕ್ಷ, ಚಂದ್ರಬರ್ಕೆ ಇತ್ಯಾದಿ ಅಲ್ಲದೆ ಮಾವಿನ ಹಣ್ಣುಗಳಾದ ಮಲ್ಲಿಕಾ, ಮಲ್ಲೋವ, ನೀಲಂ, ಕಾಳಪಾಡಿ, ಬಾದಾಮಿ, ತೋತಾಪುರಿ ಇತ್ಯಾದಿ ಹಣ್ಣುಗಳು ಲಭ್ಯವಿರುತ್ತದೆ. ಮಾವು ಹಲಸಿನಿಂದ ತಯಾರಿಸಿದ ಮೌಲ್ಯವರ್ಧಿತ ಸ್ವಾವಲಂಬಿ ಖಾದ್ಯಗಳಾದ ಹಲಸಿನ ಕಬಾಬ್, ಹಲಸಿನ ಗಾರಿಗೆ, ಚಿಪ್ಸ್, ಉಂಡ್ಯಕ್ಕ, ಹಲಸಿನ ಪಾವುಬಾಜಿ, ಕಡುಬು, ಹಲಸಿನ ಕೇಕ್, ಹೋಳಿಗೆ, ಹಪ್ಪಳ, ಉಪ್ಪಿನಕಾಯಿ, ಐಸ್ ಕ್ರೀಂ ಇತ್ಯಾದಿಗಳಲ್ಲದೆ, ವಿವಿಧ ತಾವರೆ ಹೂ ಮತ್ತು ಜಲಸಸ್ಯಗಳು, ಮಾವು ಹಲಸಿನ ಗಿಡಗಳು, ದೇಸಿ ತರಕಾರಿ ಬೀಜಗಳು, ಸಸಿಗಳು, ಕೃಷಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳು ಲಭ್ಯವಿರಲಿವೆ.

ಎರಡು ದಿನಗಳ ಕಾಲ ಬೆಳಿಗ್ಗೆ 8ರಿಂದ ಸಂಜೆ 7ರತನಕ ವಾಧಿರಾಜ ಮಂಟಪದ ಪೇಜಾವರ ವಿಶ್ವೇಶತೀರ್ಥ ವೇದಿಕೆಯಲ್ಲಿ ಸಾಂಸ್ಕೃತಿಕ ಪ್ರತಿಭಾನ್ವಿತರಿಂದ ಸೇವಾರ್ಥವಾಗಿ ಗಮಕ, ಸಂಗೀತ, ಯಕ್ಷ ಸಂಗೀತ, ಹರಿಕಥೆ, ಭಜನೆ ತಾಳಮದ್ದಳೆ, ಗಾನ ಸಂಭ್ರಮ, ಮಿಮಿಕ್ರಿ, ವಾದ್ಯ ಸಂಗೀತ, ಪರಿಸರ ಗೀತೆ ಅನಾವರಣಗೊಳ್ಳಲಿದೆ. ವಿದ್ಯಾರ್ಥಿ ಪ್ರತಿಭೆಗಳಿಗೆ ಪೂರ್ಣಿಮಾ ರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ, ದಯಾನಂದ ಕಟೀಲು, ಜನಾರ್ದನ ಹಂದೆ, ಶಿವಪ್ರಸಾದ್ ಪ್ರಭು ಇವರ ಮಾರ್ಗದರ್ಶನದಲ್ಲಿ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸುಧಾಕರ್ ರಾವ್ ಪೇಜಾವರ, ಶಿವಪ್ರಸಾದ್ ಪ್ರಭು, ಪ್ರಸಾದ್, ಜನಾರ್ಧನ ಹಂಡೆ, ದಯಾನಂದ ಕಟೀಲು ಮತ್ತಿತರರು ಉಪಸ್ಥಿತರಿದ್ದರು.

error: Content is protected !!