
ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ವತಿಯಿಂದ “ಆಟಿಡೊಂಜಿ ಐತಾರ”
ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ, ದೇವಾಡಿಗ ಮಹಿಳಾ ವೇದಿಕೆ, ದೇವಾಡಿಗ ಯುವ ವೇದಿಕೆ ಮತ್ತು ದೇವಾಡಿಗ ಟ್ರಸ್ಟ್ ಪಾವಂಜೆ ಇದರ ಆಶ್ರಯದಲ್ಲಿ “ಆಟಿಡೊಂಜಿ ಐತಾರ” ಕಾರ್ಯಕ್ರಮ ದಿನಾಂಕ ಆದಿತ್ಯವಾರ ಹಳೆಯಂಗಡಿಯ ದೇವಾಡಿಗ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಿಜಯಲಕ್ಷ್ಮಿ ಜನಾರ್ಧನ್ ಪಡುಪಣಂಬೂರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಮಾಜಿಕ ಕಾರ್ಯಕರ್ತ ಅಶೋಕ್ ವಹಿಸಿದ್ದರು.

ಆಟಿದ ಮದಿಪು ನೀಡಿದ ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಪಲ್ಲವಿ ರಾಜೇಶ್ ಅವರು, “ತುಳುವರು ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ. 12 ತಿಂಗಳುಗಳಲ್ಲಿ ತುಳುವರಿಗೆ ಆಟಿ ತಿಂಗಳು ಅತ್ಯಂತ ಮಹತ್ವದ್ದು. ಪ್ರಕೃತಿಯ ಶಕ್ತಿಯನ್ನು ನಮಗೆ ತಿಳಿಹೇಳುವ ಆಟಿ ತಿಂಗಳ ವಿಶೇಷ ಖಾದ್ಯಗಳು ಯಾವುದೇ ಕಲರ್, ಟೆಸ್ಟಿಂಗ್ ಪೌಡರ್ ಒಳಗೊಂಡಿರದೆ ಆರೋಗ್ಯಕ್ಕೆ ಪೂರಕವಾಗಿದೆ. ಹೀಗಾಗಿ ಇಂಥ ಕಾರ್ಯಕ್ರಮಗಳ ಆಯೋಜನೆ ಸ್ವಾಗತಾರ್ಹವಾದುದು“ ಎಂದರು.

ಮುಖ್ಯ ಅತಿಥಿಗಳಾಗಿ ದೇವಿಕಾ ತಿಲಕ್ ಗಂಜಿಮಠ, ಸಂಘದ ಅಧ್ಯಕ್ಷರಾದ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ , ಸಂಘದ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾದ ಯಾದವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು ಸಂಘದ ಉಪಾಧ್ಯಕ್ಷೆ ಜಯಶ್ರೀ ಯಾದವ್ ಅತಿಥಿಗಳನ್ನು ಸ್ವಾಗತಿಸಿದರು. ತುಳಸಿ ಸತೀಶ್ ಧನ್ಯವಾದ ಅರ್ಪಿಸಿದರು. ಮಂಜುಳಾ ಸುಬ್ರತ್ ಕಾರ್ಯಕ್ರಮ ನಿರೂಪಿಸಿದರು. ಗಾಯತ್ರಿ ಉಮೇಶ್ ತೋಕೂರು ತಂದಿರುವ ತಿಂಡಿ ತಿನಸುಗಳ ಮಾಹಿತಿ ಓದಿದರು.
“ಅಪ್ಪೆ ಇಲ್ಲದ ಪೊದಿಕೆ“ ವಿಜೇತರು- ಸುಚಿತ್ರ ದೇವಾನಂದ್ ಮುಕ್ಕ
”ಅಟಿದ ಮಲ್ಲಜನ“ ಅಕ್ಕಿಮುಡಿ ವಿಜೇತರು- ವಾಮನ ದೇವಾಡಿಗ ತೋಕೂರು.