“ಜನರನ್ನು ದಾಖಲೆಗಳ ಹೆಸರಲ್ಲಿ ಸತಾಯಿಸುತ್ತಿರುವ ರಾಜ್ಯ ಸರಕಾರ” -ಅಬ್ದುಲ್ ಮಜೀದ್ ಮೈಸೂರು

ಮಂಗಳೂರು: ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಈಗ ವಿವಿಧ ಯೋಜನೆಗಳಿಗಾಗಿ ದಿನಕ್ಕೊಂದು ದಾಖಲೆಗಳನ್ನು ನೀಡಬೇಕು ಎಂದು ಜನರನ್ನು ಸತಾಯಿಸುತ್ತಿದೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಪತ್ರಿಕಾಗೋಷ್ಟಿಯಲ್ಲಿ ಕಿಡಿಕಾರಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರ ಎರಡೂ ಕೂಡ ಜನಸಾಮಾನ್ಯರನ್ನು ದಾಖಲೆ ಹೆಸರಿನಲ್ಲಿ ಅಲೆದಾಡುವಂತೆ ಮಾಡುತ್ತಿದೆ. ಸಿದ್ದರಾಮಯ್ಯರ ಬಳಿಕ ರಾಜ್ಯದಲ್ಲಿ ಡಿಕೆಶಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಗ್ಯಾರಂಟಿ ಯೋಜನೆಗಳಿಗೆ ಕನಿಷ್ಠ ಮಾನದಂಡವಿದ್ದರೆ ಈಗ ಬೇರೆ ಯಾವ ರಾಜ್ಯದಲ್ಲೂ ಇಲ್ಲದ ದಾಖಲೆಗಳನ್ನು ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತಂದಿದೆ. ಇದು ಖಂಡಿತಾ ಸರಿಯಲ್ಲ. ಕನಿಷ್ಠ ಒಂದು ಅಥವಾ ಎರಡು ದಾಖಲೆಗಳನ್ನು ಮಾತ್ರವೇ ಮಾನದಂಡ ಮಾಡಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.
ಮುಂದಿನ ಚುನಾವಣೆಯಲ್ಲಿ ಜನರ ಪರವಾಗಿರುವ ಜನರ ಸಮಸ್ಯೆಗಳ ಕುರಿತು ಹೋರಾಟ ಮಾಡಿಕೊಂಡು ಅಧಿಕಾರ ಪಡೆದಿರುವ ಎಸ್ ಡಿಪಿಐ ಪಕ್ಷವನ್ನು ಜನರು ಬೆಂಬಲಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಿಯಾಜ್ ಕಡಂಬು ಮತ್ತಿತರರು ಉಪಸ್ಥಿತರಿದ್ದರು.

error: Content is protected !!