
ಮೂಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಬಸ್ ನಿಲ್ದಾಣದ ಬಳಿ ಕಾರ್ ಚಾಲಕನ ಅತಿವೇಗಕ್ಕೆ ಸ್ಕೂಟರ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ ಲ್. ಮೃತ ಸವಾರನನ್ನು ಮೂಲ್ಕಿ ಸಮೀಪದ ಕತ್ವ ನಿವಾಸಿ ಶಶಿಕುಮಾರ್ (26) ಎಂದು ಗುರುತಿಸಲಾಗಿದೆ.
ಶಶಿಕುಮಾರ್ ತಮ್ಮ ಸ್ಕೂಟರ್ (ಕೆ ಎ 19ಎಚ್ ಬಿ 7222) ನಲ್ಲಿ ಮೂಲ್ಕಿ ಮಾರ್ಕೆಟ್ ರಸ್ತೆಯಿಂದ ಹೆದ್ದಾರಿ ಕ್ರಾಸ್ ಮಾಡುತ್ತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು (ಕೆ ಎಲ್ 14 ಎ ಎಫ್ 5636) ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ಕಾರು ಸ್ಕೂಟರನ್ನು ಎಳೆದುಕೊಂಡು ಹೋಗಿದ್ದು, ಸ್ಕೂಟರ್ ಸವಾರನ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಈ ಸಂದರ್ಭ ಸ್ಥಳದಲ್ಲಿದ್ದ ಯುವಕರು ಮಾನವೀಯತೆ ಮೆರೆದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶಶಿಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮೃತ ಶಶಿಕುಮಾರ್ ರವರು ಪೈಂಟರ್, ಕೃಷಿ ವೃತ್ತಿ ನಡೆಸುತ್ತಿದ್ದ ಎನ್ನಲಾಗಿದ್ದು, ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶಾರದಾ ರವರ ಪುತ್ರರಾಗಿದ್ದಾರೆ.
