ಮಂಗಳೂರು: ಮುಂದಿನ ಬಸ್ಸಿಂದ ಬಿದ್ದ ಮಹಿಳೆ ಮಗುವನ್ನು ಬಸ್ಸಲ್ಲೇ ಆಸ್ಪತ್ರೆಗೆ ಕರೆದೊಯ್ದ ರಿಯಲ್ ಹೀರೋಸ್! ಸಿಟಿ ಬಸ್ ಸಿಬ್ಬಂದಿಯ ಮಾನವೀಯತೆಗೆ ಶಹಾಬ್ಬಾಸ್ ಎಂದ ಜನರು!!

ಮಂಗಳೂರು: ಇಂದು ಸಂಜೆ ನಗರದ ಕಾವೂರು ಸಮೀಪದ ಮರಕಡ ಜಂಕ್ಷನ್ ನಲ್ಲಿ 47 ಬಿ ನಂಬ್ರದ ಕೃಷ್ಣ ಪ್ರಸಾದ್ ಹೆಸರಿನ ಸಿಟಿಬಸ್ ನಿಂದ ಇಳಿಯುವ ವೇಳೆ ಆಯತಪ್ಪಿ ಹೆದ್ದಾರಿಗೆ ಬಿದ್ದ ಮರಕಡ ನಿವಾಸಿ ಮಹಿಳೆ ಮತ್ತು ಮಗುವನ್ನು ಹಿಂಬದಿಯಲ್ಲಿ ಸಂಚರಿಸುತ್ತಿದ್ದ 13 ಬಿ ನಂಬ್ರದ ಮಾಸ್ಟರ್ ಸಿಟಿ ಬಸ್ ಸಿಬ್ಬಂದಿ ಸಮಯ ಪ್ರಜ್ಞೆ ಮೆರೆದು ತಮ್ಮ ಬಸ್ಸಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಅದೇ ಬಸ್ಸಿನಲ್ಲೇ ಎಜೆ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಸದ್ಯ ಬಸ್ ಸಿಬ್ಬಂದಿಯ ಈ ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಜನರು ಶಹಾಬ್ಬಾಸ್ ಎಂದಿದ್ದಾರೆ.
ಮಗುವಿನ ತಲೆಗೆ ಪೆಟ್ಟು ಬಿದ್ದಿದ್ದು ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಬಸ್ ಚಾಲಕರದ ಮರಕಡ ನಿವಾಸಿ ದಯಾನಂದ ಹಾಗೂ ಕಂಡಕ್ಟರ್ ಪಂಜಿಮೊಗರು ನಿವಾಸಿಯಾದ ಸಂದೀಪ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!