CNG ದರ ಮತ್ತೆ 2 ರೂಪಾಯಿ ಏರಿಕೆ; ಮಂಗಳೂರಿನಲ್ಲಿ 1 ಕೆಜಿ CNG ಗೆ 92 ರೂ.!!

ನವದೆಹಲಿ: ಜಾಗತಿಕ ಕಚ್ಚಾ ತೈಲ ದರ ಏರಿಕೆಯಿಂದ ತೈಲ ಮಾರುಕಟ್ಟೆ ಕಂಪೆನಿಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಸಿಎನ್‌ಜಿ ದರವನ್ನು ಇಂದು(ಮೇ 26) ಮತ್ತೆ ಹೆಚ್ಚಿಸಲಾಗಿದೆ. ಪ್ರತಿ ಕೆಜಿಗೆ 2ರೂ. ಏರಿಕೆಯಾಗಿದ್ದು, ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬಂದಿದೆ.

ಕಳೆದ 11 ದಿನಗಳಲ್ಲಿ ನಾಲ್ಕನೇ ಬಾರಿ ದರ ಏರಿಕೆಯಾಗಿದ್ದು, ಒಟ್ಟು 7ರೂ. ಹೆಚ್ಚಳವಾಗಿದೆ. ದಿಲ್ಲಿಯಲ್ಲಿ ಸಿಎನ್‌ಜಿ ದರವು ಪ್ರತಿ ಕೆಜಿಗೆ 83.9ರೂ. ಆಗಿದೆ. ಮಂಗಳೂರಿನ ಸ್ಥಳೀಯ ಪಂಪ್ ಗಳಲ್ಲಿ ಒಂದು ಕೆಜಿ CNGಗೆ 92 ರೂಪಾಯಿ ಇದೆ.

ಮೇ 15ರಂದು ಪ್ರತಿ ಕೆಜಿಗೆ 2ರೂ. ಹೆಚ್ಚಿಸಲಾಗಿತ್ತು. ನಂತರ ಶುಕ್ರವಾರ 1ರೂ. ಹಾಗೂ ರವಿವಾರ ಮತ್ತೆ 1ರೂ. ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ 2ರೂ. ಹೆಚ್ಚಳ ಮಾಡಿರುವುದರಿಂದ ಮೇ 15ರಿಂದ ಈವರೆಗೆ ಒಟ್ಟು 7 ರೂ. ಏರಿಕೆಯಾಗಿದೆ.

ಅಮೆರಿಕ–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹಾರ್ಮುಝ್‌ ಜಲಸಂಧಿಯಲ್ಲಿ ಅಡಚಣೆ ಉಂಟಾಗುವ ಭೀತಿ ತಲೆದೋರಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಕೈಗಾರಿಕಾ ಮೂಲಗಳು ತಿಳಿಸಿವೆ.

error: Content is protected !!