ನಟಿ ಚೈತ್ರಾ ಆಚಾರ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಸಭ್ಯ ಕಾಮೆಂಟ್: ಸಿಕ್ಕಿಬೀಳುತ್ತಿದ್ದಂತೆ ಕಾಲು ಹಿಡಿದ ಪೊಲೀಸ್ ‌ಸಮವಸ್ತ್ರಧಾರಿ!

ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ಹಾಗೂ ಪ್ರಸಿದ್ಧ ನಟಿ ಚೈತ್ರಾ ಆಚಾರ್ (Chaitra Achar) ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಕಾಮೆಂಟ್ ಮಾಡಿ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಚ್ಚರಿಯ ವಿಷಯವೆಂದರೆ, ನಟಿಗೆ ಈ ರೀತಿ ಅಶ್ಲೀಲ ಪದಬಳಕೆ ಮಾಡಿ ಸಿಕ್ಕಿಬಿದ್ದಿರುವುದು ಮತ್ತಾರೂ ಅಲ್ಲ, ಒಬ್ಬ ಪೊಲೀಸ್ ಸಮವಸ್ತ್ರಧಾರಿ! ಈ ಇಡೀ ಪ್ರಸಂಗವನ್ನು ನಟಿ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಹಂಚಿಕೊಳ್ಳುವ ಮೂಲಕ ಕಿಡಿಕಾರಿದ್ದಾರೆ.

Actress Chaitra J Achar's bold photos in white dress went viral

‘ಸಪ್ತ ಸಾಗರದಾಚೆ ಎಲ್ಲೋ’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಚೈತ್ರಾ ಆಚಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿದ್ದ ಬೋಲ್ಡ್ ಲುಕ್‌ನ ಫೋಟೋಗಳಿಗೆ ‘ಮಹೇಶ್ ಹೊಸಮನಿ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಅತ್ಯಂತ ಅಸಭ್ಯ ಮತ್ತು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಹಾಕಲಾಗಿತ್ತು. ಈ ಖಾತೆಯ ಪ್ರೊಫೈಲ್‌ನಲ್ಲಿ ವ್ಯಕ್ತಿ ಪೊಲೀಸ್ ಸಮವಸ್ತ್ರದಲ್ಲಿ ಇರುವುದನ್ನು ಗಮನಿಸಿದ ನಟಿ,   ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಖಾಕಿ ಸಮವಸ್ತ್ರದಲ್ಲಿದ್ದ ವ್ಯಕ್ತಿಯ ಅಸಭ್ಯ ವರ್ತನೆಯನ್ನು ಸುಮ್ಮನೆ ಬಿಡದ ಚೈತ್ರಾ ಆಚಾರ್, ಆತ ಕಳುಹಿಸಿದ್ದ ಮೆಸೇಜ್ ಹಾಗೂ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್ ಅನ್ನು ತೆಗೆದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಈ ಸ್ಕ್ರೀನ್‌ಶಾಟ್‌ಗಳನ್ನು ಬೆಂಗಳೂರು ಸಿಟಿ ಪೊಲೀಸ್ (Bangalore City Police) ಅಧಿಕೃತ ಖಾತೆಗೆ ಟ್ಯಾಗ್ ಮಾಡಿ, ಇಂತಹ ವ್ಯಕ್ತಿಯ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾರೆ.

chaithra j achar,chaithra achar,chaitra j achar,chaithra j achar songs,chaitra achar,chaithra j achar hot songs,chaitra achar movies,rakshit shetty chaithra j achar songs,chaithra j achar dance,chaithra j achar movies,chaithra achar interviews,chaitra,chaitra j achar hot,chaitra achar news,chaitra achar reels,chaitra j achar songs, chaithra achar new photo shoot, chaithra new look photos, ಚೈತ್ರಾ ಆಚಾರ್ ಫೋಟೋ ಶೂಟ್, ಚೈತ್ರಾ ಆಚಾರ್ ಹೊಸ ಸಿನಿಮಾಗಳು, ಚೈತ್ರಾ ಆಚಾರ್ ಮುಂದಿನ ಸಿನಿಮಾ

ನಟಿ ಚೈತ್ರಾ ಆಚಾರ್ ಅವರು ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಇಡೀ ಘಟನೆ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ. ಕಂಪ್ಲೇಂಟ್ ಪೊಲೀಸರ ಕೈಸೇರುತ್ತಿದ್ದಂತೆ ಮತ್ತು ತಮಗೆ ಸಂಕಷ್ಟ ಎದುರಾಗುವುದನ್ನು ಅರಿತ ಮಹೇಶ್ ಹೊಸಮನಿ, ತಕ್ಷಣವೇ ನಟಿಯ ಇನ್‌ಬಾಕ್ಸ್‌ನಲ್ಲಿ ಕ್ಷಮೆಯಾಚಿಸಲು ಆರಂಭಿಸಿದ್ದಾನೆ.

“ಸಾರಿ ಮೇಡಂ, ನನ್ನಿಂದ ತಪ್ಪಾಗಿದೆ. ನಿಮ್ಮ ಮೇಲಿನ ಕಾಳಜಿಯಿಂದಲೇ ಆ ರೀತಿ ಮೆಸೇಜ್ ಹಾಕಿದ್ದೆ (ಕಮೆಂಟ್ ಮಾಡಿದ್ದೆ). ದಯವಿಟ್ಟು ಆ ಪೋಸ್ಟ್ ಅನ್ನು ಡಿಲೀಟ್ ಮಾಡಿ. ಇಲ್ಲದಿದ್ದರೆ ಇದು ನನ್ನ ಕರಿಯರ್‌ಗೆ (ಉದ್ಯೋಗಕ್ಕೆ) ದೊಡ್ಡ ಸಮಸ್ಯೆಯಾಗುತ್ತದೆ” ಎಂದು ಆತ ಗೋಗರೆದಿರುವ ಮೆಸೇಜ್‌ಗಳ ಸ್ಕ್ರೀನ್‌ಶಾಟ್ ಅನ್ನು ಸಹ ನಟಿ ಮತ್ತೊಂದು ಸ್ಟೋರಿಯಲ್ಲಿ ಹಂಚಿಕೊಂಡು ಆತನ ಮುಖವಾಡವನ್ನು ಸಾರ್ವಜನಿಕವಾಗಿ ಬಟಾಬಯಲು ಮಾಡಿದ್ದಾರೆ.

error: Content is protected !!