ತುಮಕೂರು: “ಪೆಟ್ರೋಲ್-ಡೀಸೆಲ್ ಉಳಿಸಬೇಕು!” ಎಂಬ ಮೋದಿಯ ಮಾತನ್ನು ಕೇಂದ್ರ ಸಚಿವ ವಿ. ಸೋಮಣ್ಣ ಅದೆಷ್ಟು ಸೀರಿಯಸ್ ಆಗಿ ತಗೆದುಕೊಂಡಿದ್ದಾರೆ ಎಂದರೆ, ತುಮಕೂರಿನಲ್ಲಿ ನಡೆದ ದಿಶಾ (DISHA) ಸಭೆಗೆ ಬರುವಾಗ ತಮ್ಮ ಇಡೀ ಸೆಕ್ಯೂರಿಟಿ ಪಡೆಯನ್ನೇ ದಾರಿಯಲ್ಲೇ ಡ್ರಾಪ್ ಮಾಡಿ ಒಂಟಿ ಸಲಗದಂತೆ ಪ್ರತ್ಯಕ್ಷರಾಗಿದ್ದಾರೆ!

ಸದಾ ಸೈರನ್ ಸೌಂಡು, ನೂರಾರು ಕಾರುಗಳ ಜಂಗುಳಿ ನಡುವೆ ಹಾರಾಡುತ್ತಿದ್ದ ಸಚಿವರು, ಈ ಬಾರಿ ಆರ್‌ಪಿಎಫ್ (RPF) ಸೇರಿದಂತೆ ಯಾವುದೇ ಹೈಫೈ ಭದ್ರತಾ ವಾಹನಗಳಿಲ್ಲದೆ ಕೇವಲ ಲೋಕಲ್ ಸಿಂಗಲ್ ಬೆಂಗಾವಲು ವಾಹನದೊಂದಿಗೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದ್ದಾರೆ.

ಸಚಿವರ ಈ ಸಿಂಪ್ಲಿಸಿಟಿ ನೋಡಿ ಸಾರ್ವಜನಿಕ ವಲಯದಲ್ಲಿ ಈಗ ಭರ್ಜರಿ ಚರ್ಚೆ ಮತ್ತು ಕಾಮಿಡಿ ಕಿಕ್ ಶುರುವಾಗಿದೆ. ಜನ ಆಡಿಕೊಳ್ಳುತ್ತಿರುವುದು ಏನೆಂದರೆ, “ಅಲ್ಲಾ ಸ್ವಾಮಿ, ಸೋಮಣ್ಣ ಅವರು ಇರೋದು ರೈಲ್ವೆ ಇಲಾಖೆಯಲ್ಲಿ. ರೈಲಿನಲ್ಲಿ ಹೋಗುವಾಗ ಆರ್‌ಪಿಎಫ್ ಭದ್ರತೆ ಬೇಕು ಅಂದ್ರೆ ಒಂದು ಅರ್ಥ ಇದೆ. ಆದರೆ ಇವರು ತುಮಕೂರಿಗೆ ಕಾರ್‌ನಲ್ಲಿ ಬರುವಾಗ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಕಮಾಂಡೋಗಳ ಬೆಂಗಾವಲು ಪಡೆ ಯಾಕೆ ಬೇಕು? ಎಂದಿದ್ದಾರೆ.

ಅಧಿಕಾರಿಗಳು ಕೂಡ ಒಳಗೊಳಗೇ, “ಸಚಿವರು ಪೆಟ್ರೋಲ್ ಉಳಿಸೋ ನೆಪದಲ್ಲಿ ತಮಗೆ ಸಂಬಂಧವೇ ಇಲ್ಲದ ಆರ್‌ಪಿಎಫ್ ಬೆಂಗಾವಲು ಪಡೆಯನ್ನು ಕಡಿತಗೊಳಿಸಿ ಭರ್ಜರಿ ಬಿಲ್ಡಪ್ ಕೊಟ್ಟಿದ್ದಾರೆ. ಅಸಲಿಗೆ ಇವರಿಗೆ ತುಮಕೂರು ತಲುಪೋಕೆ ಲೋಕಲ್ ಪೊಲೀಸರ ಒಂದೇ ಒಂದು ಜಿಪ್ಸಿ ಸಾಕಿತ್ತು, ಅದನ್ನೇ ದೊಡ್ಡ ತ್ಯಾಗ ಅನ್ನೋ ರೇಂಜ್‌ಗೆ ಪ್ರೊಜೆಕ್ಟ್ ಮಾಡ್ತಿದ್ದಾರೆ” ಎಂದು ಪಿಸುಗುಟ್ಟಿಕೊಳ್ಳುತ್ತಿದ್ದಾರೆ.
