ನಾಡಿನ ಸಂಸ್ಕೃತಿ ಉಳಿಸುವಲ್ಲಿ ಕಟೀಲು ಮುಖ್ಯ ಪಾತ್ರವನ್ನು ವಹಿಸಿದೆ: ಆರೋಗ್ಯ ಸಚಿವ ಯು.ಟಿ.ಖಾದರ್

ಕಟೀಲು: ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಸಂಸ್ಮರಣಾ ಸಮಿತಿ ಮುಂಬೈ ಯುಎಇಯ ಪರವಾಗಿ ಪದ್ಮನಾಭ ಕಟೀಲು ದುಬೈ ಆಯೇಜನೆಯಲ್ಲಿ ೨೬ನೇ ವರ್ಷದ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಕಾರ್ಯಕ್ರಮ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಸರದ ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಭಾಭವನದಲ್ಲಿ ಕಟೀಲಿನ ಆನುವಂಶಿಕ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಕಟೀಲು ಮತ್ತು ಅರಿಕೋಡಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರ, ಧರ್ಮದರ್ಶಿ ಹರೀಶ್ ಅರಿಕೋಡಿ ಇವರ ಶುಭ ಆಶಿರ್ವಾದದೂಂದಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿಯನ್ನು ಹರೀಶ್ ಸೇರಿಗಾರ್ ಎಕ್ಮೆ ಬಿಲ್ಡರ್ಸ್ ದುಬೈ ಇವರಿಗೆ, ದಾರ್ಶನಿಕ ಯಜಮಾನ ಕಲ್ಲಾಡಿ ವಿಠಲ ಶೆಟ್ಟಿ ಸ್ಮೃತಿ ಗೌರವವನ್ನು ಚಂದ್ರಹಾಸ್ ಎಂ. ರೈ ಬೊಳ್ನಾಡು ಗುತ್ತು, ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ಸ್ಮೃತಿ ಗೌರವ ರವಿಶಂಕರ ವಳಕ್ಕುಂಜ ನೀಡಿದರು. ಶ್ರೀ ಕಟೀಲು ಮೇಳ ಚೆಂಡೆಯ ಗುರಿಕಾರ ನಿಡ್ಲೆ ನರಸಿಂಹ ಭಟ್ ಸ್ಮೃತಿ ಗೌರವವನ್ನು ಮೋಹನ್ ಶೆಟ್ಟಿಗಾರ್ ಶ್ರೀ ಕಟೀಲು ಮೇಳ ಇವರಿಗೆ ಕಲಾವಿದ ಸಂಮಾನವನ್ನ ನಾರಾಯಣ ಕುಲಾಲ್ ಶ್ರೀ ಕಟೀಲು ಮೇಳ ಇವರಿಗೆ, ಹೊರನಾಡ ಕಲಾಪೋಷಕ ಗೌರವವನ್ನು ದಿನೇಶ್ ಶೆಟ್ಟಿ ಕೊಟ್ಟಿಂಜ (ಯಕ್ಷಗಾನ ಅಭ್ಯಾಸ ಕೇಂದ್ರ, ಯುಎಇ)
ಹೊರನಾಡ ಕಲಾವಿದ ಗೌರವ ಶೇಖರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ,ಹೊರನಾಡ ಸಮಾಜ ಸೇವಕ ಗೌರವ ಸುದರ್ಶನ ಹೆಗ್ಡೆ ಕಾರ್ಕಳ,ಹೊರನಾಡ ಸಂಘಟನಾ ಗೌರವ ದೀಪಕ್ ಎಸ್. ಪಿ. (ಅಧ್ಯಕ್ಷರು, ದುಬೈ ಬಿಲ್ಲವಾಸ್) ಹೊರನಾಡ ಭಾಷಾ ಗೌರವ (ತುಳು- ಕನ್ನಡ) ದಯಾನಂದ ಕಿರೋಡಿಯನ್ (ಸ್ಥಾಪಕ ಸದಸ್ಯರು, ಯಕ್ಷಮಿತ್ರರು, ದುಬೈ) ಮತ್ತು ಸಂಸ್ಥೆಯ ವಿಶೇಷ ಗೌರವಾರ್ಪಣೆವನ ಬಜಪೆ ಬಂಟರ ಸಂಘದ ಮಾಜಿ ಅಧ್ಯಕ್ಷ ಮಲಾಡ್ ಪ್ರಸಾದ್ ಹೋಟೆಲ್ ಮಾಲಕ ಬಾಬು ಎಸ್. ಶೆಟ್ಟಿ ಪೆರಾರ,ಚಂದ್ರಶೇಖರ ಬೆಳ್ಚಡ ಕಟೀಲು (ಆಡಳಿತ ಮೊಕ್ತೇಸರರು, ಶ್ರೀ ಭಗವತೀ ಕ್ಷೇತ್ರ ಸಸಿಹಿತ್ಲು)ಡಾ. ಅರುಣೋದಯ ರೈ. ಬಿಳಿಯೂರುಗುತ್ತು (ಸಿ ಎಂಡಿ, ಸೈಂಟ್ ಆಗ್ನೆಸ್ ಸ್ಕೂಲ್, ಮೀರಾ ಭಯಂದರ್) ಇವರಿಗೆ ನೀಡಿ ಸನ್ಮಾನ್ಯಶಿ ಗೌರವಿಸಲಾಯಿತು,
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಸಚಿವರಾದ ಯು.ಟಿ.ಖಾದರ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ಶ್ರೀದೇವರ ದರ್ಶನ ಮಾಡಿ ಅತ್ಯಂತ ಪುರಾತನ ಮತ್ತು ಶಕ್ತಿ ಕೇಂದ್ರವಾದ ಕಟೀಲು ಈ ನಾಡಿನ ಸಂಸ್ಕೃತಿ ಉಳಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದೆ ಹಿರಿಯರ ಸ್ಮರಣೆಯನ್ನು ಮಾಡಿರುವ ಈ ಕಾರ್ಯಕ್ರಮ ಅತ್ಯoತ ಶ್ರೇಷ್ಠವಾದದ್ದು ಎಂದು ನುಡಿದರು.
ಸಮಾರಂಭದ ಉದ್ಘಾಟನೆಯನ್ನು ಮೋಹನ್ ಆಳ್ವ ನೆರವೇರಿಸಿ ಈ ಪವಿತ್ರ ಕಾರ್ಯಕ್ರಮ ಮಾಡುವುದು ಮತ್ತು ನೋಡುವುದು ನಮಗೆಲ್ಲ ಭಾಗ್ಯ ಸಾಮಾನ್ಯ ಯಕ್ಷಗಾನದ ಪೋಷಕನಾಗಿರುವ ಪದ್ಮನಾಭ್ ಕಟೀಲು ಮತ್ತು ಅಸ್ರಣ್ಣ ಮೇಲಿರುವ ನಂಬಿಕೆಯಿಂದ 100 ಯಕ್ಷಗಾನ ಬಯಲಾಟ ಪ್ರದರ್ಶನ ಮಾಡಿದ್ದಾರೆ, ಮತ್ತು ೨೬ನೇ ವರ್ಷದಿಂದ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಕಾರ್ಯಕ್ರಮ ಮಾಡಿರುವುದು ನಂಬಿಕೆ ಕಾರಣ ಎಂದರು.
ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಆಶೀರ್ವಚನ ನೀಡಿ ಪದ್ಮನಾಭ ಕಟೀಲು ದುಬೈ ಇವರು ಕಳೆದ 26 ವರ್ಷಗಳಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ ಕಟೀಲು ಅಮ್ಮ ನಾ ಮೇಲೆ ವಿಶ್ವಾಸ ವ್ಯಕ್ತ ಪಡಿಸುತ್ತದೆ.ಎಂದ ಎಂದು ನುಡಿದರು.


ವೇದಿಕೆಯಲ್ಲಿ ,ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಕಲಾಪೋಷಕರು ಬಾಬು ಎಸ್. ಶೆಟ್ಟಿ ಪೆರಾರ ಮಲಾಡ್, ಮುಂಬಯಿ ಚಂದ್ರಶೇಖರ ಬೆಳ್ಳಡ ಕಟೀಲು ,ಅಗರಿ ರಾಘವೇಂದ್ರ ರಾವ್ ಅಗರಿ ಎಂಟರ್‌ಪ್ರೈಸಸ್ ರಾಘವೇಂದ್ರ ಆಚಾರ್ಯ ಬಟ್ಟೆ ಗಿರೀಶ್ ಎಂ. ಶೆಟ್ಟಿ, ಶ್ರೀ ಡೆವಲಪರ್ಸ್ ಕಟೀಲು ,ರವಿ ಶೆಟ್ಟಿಗಾರ್ ಕಾರ್ಕಳ ಅಧ್ಯಕ್ಷರು, ಪದ್ಮಶಾಲಿ ಒಕ್ಕೂಟ, ಸಂದೀಪ್ ಬಿ. ಕೆ. ಕೂಳೂರು, ದಯಾನಂದ ಶೆಟ್ಟಿ ಹಿರಿಯಡ್ಕ,ನಿಡ್ಡೆ ರಾಮ್ ಭಟ್ ನರನ್ಸ್ ಫುಡ್, ಪ್ರಮೋದ್ ಭಟ್ ಶ್ರೀಮಾತಾ ಕ್ಯಾಟರರ್ಸ್,
ಶ್ರೀಕಾಂತ ಶೆಟ್ಟಿ ಅಗರಿ ಬಾಳಿಕೆ ಹೋಟೇಲ್ ಸ್ವಯಮ್, ಧನಂಜಯ ಶೆಟ್ಟಿಗಾ‌ರ್ ಸಾಗರಿಕ ಪಕ್ಷಿಕೆರೆ, ರಾಧಾಕೃಷ್ಣ ನಿವಾಸ, ಕಿಲೆಂಜೂರು ,ಪ್ರೇಮಾನಂದ ಕುಲಾಲ್ ಕೊಡಿಕಲ್,ರವಿ ಕೋಟ್ಯಾನ್ ಶಿಬರೂರು,
ಮತ್ತಿತರ ಉಪಸ್ಥರಿದ್ದರು,
ಕಾರ್ಯಕ್ರಮದ ನಿರೂಪಣೆಯನ್ನು ಡಾ. ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ,ಅಭಿನಂದನಾ ಭಾಷಣ ಸುಣ್ಣಂಬಳ ವಿಶ್ವೇಶ್ವರ ಭಟ್ ಮಾಡಿದರು.
ಕಾರ್ಯಕ್ರಮದಲ್ಲಿ ಪದ್ಮನಾಭ ಕಟೀಲು ದಂಪತಿಯನ್ನು ಗೌರವಿಸಿದರು,
ಶ್ರೀಕ್ಷೇತ್ರ ಕಟೀಲಿನ 7 ಮೇಳದ ಆಯ್ದ ಕಲಾವಿದರ ಕೂಡುವಿಕೆಯಿಂದ
“ದೇವ ಸಂಕಲ್ಪ ‘ ಪ್ರದರ್ಶನ ಗೂಂಡಿತು.
ಕಾರ್ಯಕ್ರಮದಲ್ಲಿ ದೇಶ ವಿದೇಶಗಳಲ್ಲಿ ಇರುವ ಪದ್ಮನಾಭ ಅಭಿಮಾನಿಗಳು ಮತ್ತು ಕಟೀಲು ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.


ಪದ್ಮನಾಭ ಕಟೀಲು ನಂತ ಸಾಮಾನ್ಯ ಸೇವಾಕರ್ತರೊಂದಿಗೆ ನಿರಂತರ ಇರುತ್ತೇನೆ:
ಐಕಳ ಹರೀಶ್ ಶೆಟ್ಟಿ

ಗೋಪಾಲಕೃಷ್ಣ ಅಸ್ತ್ರಣ್ಣರ ಸಂಸ್ಮರಣೆ ಪದ್ಮನಾಭ ಕಟ್ಟಿಲು ದುಬೈ ಇವರು ಕಳೆದ 26 ವರ್ಷಗಳಿಂದ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ ಸಂಸ್ಮರಣದ 25 ವರ್ಷದ ಕಾರ್ಯಕ್ರಮದಲ್ಲಿ ನಿರಂತರ ಇಪ್ಪತೈದು ಸಮಾರಂಭದ ಅಧ್ಯಕ್ಷತೆಯನ್ನು ಐಕಳ ಅವರು ವಹಿಸಿ ಯಶಸ್ವೀ ಗೊಳಿಸಿದ್ದಾರೆ ಎನ್ನುವ ವಿಶೇಷ ಕ್ಕಾಗಿ ಐಕಳ ಹರೀಶ್ ಶೆಟ್ಟಿ ,ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಗಳಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಸಂಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡುತ್ತಾ ಶ್ರೀ ಕ್ಷೇತ್ರ ಕಟಿಲಿನ ತಾಯಿ ದುರ್ಗಾಪರಮೇಶ್ವರಿ ದೇವರು ಪ್ರತಿಯೊಂದು ಅರಿತಿದ್ದಾರೆ ನಮ್ಮ ದುಃಖ ದುಮ್ಮಾನಗಳನ್ನು ಆಕೆಯ ಪಾದಗಳಿಗೆ ಸಮರ್ಪಿಸಿ ಅಳುವುದಿದ್ದರೆ ಆಕೆಯ ಮುಂಬಾಗದಲ್ಲಿ ಅತ್ತು ನಮ್ಮ ನೋವುಗಳನ್ನು ತೋಡಿಕೊಂಡು ಪ್ರಾರ್ಥಿಸುತ್ತೇವೆ ಈ ಕ್ಷೇತ್ರದಲ್ಲಿ ಯಾರೇ ಅಪಚಾರ ಮಾಡಿದರು ಅವರಿಗೆ ಆ ತಾಯಿ ಒಳ್ಳೆಯದನ್ನು ಮಾಡುವುದಿಲ್ಲ ಈ ಕ್ಷೇತ್ರದಲ್ಲಿ ಒಳ್ಳೆಯ ರೀತಿಯಲ್ಲಿ ಪ್ರಾರ್ಥಿಸಿದವರಿಗೆ ಒಳ್ಳೆಯದನ್ನೇ ಮಾಡಿದ್ದಾರೆ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ ಇಂದು ಹಿರಿಯರಾದ ಗೋಪಾಲಕೃಷ್ಣ ಅಸ್ತ್ರಣ್ಣರ ಸಂಸ್ಮರಣೆ ಮಾಡಿದ್ದು ಅತ್ಯಂತ ಶ್ರೇಷ್ಠ ಕಾರ್ಯ. ಪದ್ಮನಾಭ ಕಟೀಲು ನಂತ ಸಾಮಾನ್ಯ ಸೇವಾಕರ್ತರೊಂದಿಗೆ ನಿರಂತರ ಇರುತ್ತೇನೆ ಎಂದು ನುಡಿದರು.

error: Content is protected !!