ಕಾಸರಗೋಡು: ಕೇರಳದಲ್ಲಿ ಹೊಸ ಸರ್ಕಾರ ಬರೋ ಮುಂಚೆನೇ ಉಚಿತ ಬಸ್ ಜರ್ನಿ ಕೇಳಿದ ಬಿಜೆಪಿ ಲೇಡೀಸ್ ಗ್ಯಾಂಗ್!

ಕಾಸರಗೋಡು: “ಮಗು ಹುಟ್ಟೋ ಮುಂಚೆನೇ ಕುಲಾವಿ ಹೊಲಿಸಿದ್ರು” ಅನ್ನೋ ಹಳೇ ಗಾದೆಮಾತನ್ನು ನೀವು ಕೇಳಿರ್ತೀರಾ. ಆದ್ರೆ ಕೇರಳದ ಕಾಸರಗೋಡಿನಲ್ಲಿ ಬಿಜೆಪಿ ಮಹಿಳಾ ಮಣಿಯರು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಮದುವೆ ಫಿಕ್ಸ್ ಆಗುವ ಮುಂಚೆನೇ ಮಗುವಿಗೆ ಸ್ಕೂಲ್ ಸೀಟು ಕೇಳುವ ರೇಂಜ್‌ಗೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ!

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆದ್ದು ಬೀಗಿದೆ. ವಿ.ಡಿ. ಸತೀಶನ್ ಅವರನ್ನು ಸಿಎಂ ಅಂತ ಕಾಂಗ್ರೆಸ್ ಹೈಕಮಾಂಡ್ ಅನೌನ್ಸ್ ಮಾಡಿದ್ದಷ್ಟೇ ತಡ, ಇನ್ನು ಮಂತ್ರಿ ಮಂಡಲ ರಚನೆಯಾಗಿಲ್ಲ, ಸಿಎಂ ಪ್ರಮಾಣ ವಚನ ಸ್ವೀಕರಿಸಿಲ್ಲ, ವಿಧಾನಸೌಧದ ಕೀಲಿ ಕೈ ಕೂಡ ಅವರ ಕೈ ಸೇರಿಲ್ಲ! ಆದರೆ ಅಷ್ಟರೊಳಗೇ ಬಿಜೆಪಿ ಜಿಲ್ಲಾಧ್ಯಕ್ಷೆ ಎಮ್.ಎಲ್. ಅಶ್ವಿನಿ ನೇತೃತ್ವದ 15 ಮಂದಿ ಮಹಿಳಾ ಲೇಡೀಸ್ ಗ್ಯಾಂಗ್ ಕಾಸರಗೋಡು ಬಸ್ ಸ್ಟ್ಯಾಂಡ್‌ಗೆ ಲಗ್ಗೆ ಇಟ್ಟಿದೆ!

ಅಷ್ಟಕ್ಕೂ ಈ ಲೇಡೀಸ್ ಗ್ಯಾಂಗ್ ಅಲ್ಲಿಗೆ ಬಂದಿದ್ದು ಯಾಕೆ ಗೊತ್ತಾ? ಕಾಂಗ್ರೆಸ್ ಪ್ರಚಾರದ ವೇಳೆ “ನಾವು ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (ಇಂದಿರಾ ಗ್ಯಾರಂಟಿ) ಕೊಡ್ತೀವಿ” ಅಂತ ಪ್ರಣಾಳಿಕೆಯಲ್ಲಿ ಹೇಳಿತ್ತಂತೆ. ಅಷ್ಟೇ ಅಲ್ಲ, “ಮೇ 15 ರಿಂದಲೇ ಈ ಯೋಜನೆ ಶುರು” ಅಂತ ಸತೀಶನ್ ಎಲ್ಲೋ ಭಾಷಣ ಬಿಟ್ಟಿದ್ರಂತೆ.

ಅಷ್ಟೇ! ನಮ್ಮ ಬಿಜೆಪಿ ಲೇಡೀಸ್ ಕರಾರುವಕ್ಕಾಗಿ ಮೇ 15 ರಂದೇ ಕಾಸರಗೋಡಿನಿಂದ ಮಂಗಳೂರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಸೀಟು ಹಿಡಿದು ಕೂತ್ಕೊಂಡ್ರು! ಕಂಡಕ್ಟರ್ ಬಂದು “ಟಿಕೆಟ್ ಪ್ಲೀಸ್” ಅಂದಿದ್ದಕ್ಕೆ, “ಹಲೋ… ನಿನ್ನ ಸಿಎಂ ಸತೀಶನ್ ಇವತ್ತಿನಿಂದ ಫ್ರೀ ಅಂದಿದ್ದಾರೆ, ನಾವ್ಯಾಕೆ ಟಿಕೆಟ್ ತಗಳ್ಬೇಕು? ಗಾಡಿ ಬಿಡು” ಅಂತ ಆರ್ಡರ್ ಮಾಡಿದ್ರು.

ಪಾಪ ಆ ಡ್ರೈವರ್ ಮತ್ತು ಕಂಡಕ್ಟರ್ ತಲೆ ಕೆರೆದುಕೊಂಡ್ರು. “ಅಮ್ಮ ತಾಯಿ… ಇನ್ನು ಸರ್ಕಾರವೇ ಬಂದಿಲ್ಲ, ನಮಗೆ ಆರ್ಡರ್ ಕಾಪಿನೂ ಬಂದಿಲ್ಲ, ಟಿಕೆಟ್ ತಗಳ್ದಿದ್ರೆ ಗಾಡಿ ಕದಲಿಸಲ್ಲ” ಅಂತ ಡ್ರೈವರ್ ಸ್ಟೇರಿಂಗ್ ಬಿಟ್ಟು ಕೈಕಟ್ಟಿ ಕೂತೇ ಬಿಟ್ಟ!

ಬಸ್ ಮೂವ್ ಆಗಲ್ಲ ಅಂತ ಗೊತ್ತಾಗುತ್ತಿದ್ದಂತೆ ನಮ್ಮ ಪ್ರತಿಭಟನಾಕಾರರು ಸಖತ್ ಲಾಜಿಕ್ ಮಾತಾಡಿದ್ರು. “ಬಸ್ ಮೂವ್ ಆದ್ಮೇಲಲ್ವಾ ಟಿಕೆಟ್ ತಗೊಳೋದು? ನೀನು ಮುಂಚೆನೇ ಗಾಡಿ ನಿಲ್ಲಿಸಿ ನಮಗೆ ಅನ್ಯಾಯ ಮಾಡ್ತಿದ್ದೀಯಾ” ಅಂತ ಡ್ರೈವರ್ ಮೇಲೇನೆ ಗರಂ ಆದ್ರು! ಕೊನೆಗೆ ಬೇರೆ ದಾರಿ ಇಲ್ಲದೆ ಬಸ್‌ನಿಂದ ಕೆಳಗಿಳಿದು ಇಡೀ ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್‌ಗೇ ಮುತ್ತಿಗೆ ಹಾಕಲು ಪ್ಲಾನ್ ಮಾಡಿದ್ರು.

ವಿಷಯ ತಿಳಿದು ಓಡೋಡಿ ಬಂದ ಪೊಲೀಸರು, “ನಿಮ್ಮ ಕಾಮಿಡಿ ಸಾಕು ನಿಲ್ಲಿಸಿ, ಬಸ್ ಸ್ಟ್ಯಾಂಡ್ ಬ್ಲಾಕ್ ಮಾಡಿದ್ರೆ ಎಲ್ಲರನ್ನೂ ಅರೆಸ್ಟ್ ಮಾಡ್ತೀವಿ” ಅಂತ ಲಾಠಿ ತೋರಿಸಿದ್ರು. ಅದಕ್ಕೂ ಹೆದರದ ಲೇಡೀಸ್, “ಹಾಗಾದ್ರೆ ನಮ್ಮನ್ನ ಅರೆಸ್ಟ್ ಮಾಡಿ, ನಾವೇ ಪೊಲೀಸ್ ಸ್ಟೇಷನ್‌ಗೆ ಮೆರವಣಿಗೆ ಮಾಡ್ತೀವಿ” ಅಂತ ತಾವೇ ಲೈನ್ ಬಿಟ್ಟು ಪೊಲೀಸ್ ಸ್ಟೇಷನ್ ಕಡೆ ವಾಕಿಂಗ್ ಹೊರಟ್ರು! ಪೊಲೀಸರು ಬೇಡಪ್ಪಾ ನಿಮ್ಮ ಸಹವಾಸ ಅಂತ ಕೈಮುಗಿದ ಮೇಲೆ ಎಲ್ಲರೂ ನಗುತ್ತಾ ಮನೆ ಕಡೆ ಮುಖ ಮಾಡಿದ್ರು.

ಈ ಸುದ್ದಿ ಹೊರಬೀಳುತ್ತಿದ್ದಂತೆ ಫೇಸ್‌ಬುಕ್ ಮತ್ತು ಟ್ರೋಲ್ ಪೇಜ್‌ಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಅವರ ಅಕೌಂಟ್‌ಗೆ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.

error: Content is protected !!