
ಮೂಲ್ಕಿ: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಪಡುಬಿದ್ರಿಯ ಪ್ರಿಯದರ್ಶಿನಿ ಬ್ಯಾಂಕ್ ನಲ್ಲಿ ಜಾಗದ ದಾಖಲೆಗಳನ್ನು ಅಡವಿರಿಸಿ 20 ಲಕ್ಷ ಸಾಲ ಪಡೆದಿದ್ದು ಅದನ್ನು ತನ್ನ ಖಾತೆಗೆ ಜಮಾ ಮಾಡುವ ಬದಲು ಬೇರೊಬ್ಬರ ಖಾತೆಗೆ ಜಮಾ ಮಾಡುವ ಮೂಲಕ ವಂಚನೆ ನಡೆದಿದೆ ಎಂದು ಪಡುಬಿದ್ರಿ ಪೊಲಿಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಸಿಬ್ಬಂದಿ ಸಹಿತ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಹಳೆಯಂಗಡಿ ನಿವಾಸಿ ನಾಗೇಶ್ (58) ಎಂಬುವರು ದೂರು ನೀಡಿದವರು.
ನಾಗೇಶ್ ಅವರು ಮದುವೆಗಾಗಿ 28/08/2023 ರಂದು ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಗೆ ತೆರಳಿ ವಸಂತ ಬೇರ್ನಾಡ್ ಅವರನ್ನು ಭೇಟಿಯಾಗಿ ಸಾಲ ನೀಡುವಂತೆ ಕೇಳಿದ್ದರು. ಈ ವೇಳೆ ₹5 ಲಕ್ಷ ಸಾಲ ನೀಡುವುದಾಗಿ ಹೇಳಿ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದರು. ಅದರಂತೆ ನಾಗೇಶ್ ಮ 66 ಸೆಂಟ್ಸ್ ಜಾಗದ ಮೂಲ ದಾಖಲೆಗಳನ್ನು ಪಡುಬಿದ್ರಿ ಶಾಖೆಯಲ್ಲಿ ಅಡವಿರಿಸಿದ್ದರು.
ಸೆ.6ರಂದು 20 ಲಕ್ಷ ಸಾಲ ಮಂಜೂರು ಮಾಡಿಕೊಂಡು ಅದರಲ್ಲಿ 19,10,000 ರೂ. ಹಣವನ್ನು ಶೇಖ್ ವಜೀರ್ ಎಂಬಾತನ ಖಾತೆಗೆ ವರ್ಗಾಯಿಸಿದ್ದು ವಿವಿಧ ಹಂತಗಳಲ್ಲಿ ಕೇವಲ ₹5 ಲಕ್ಷ ಮಾತ್ರ ನೀಡಿದ್ದಾಗಿ ನಾಗೇಶ್ ದೂರಿದ್ದಾರೆ.
ತನಗೆ ಬ್ಯಾಂಕ್ ನಿಂದ ಮೋಸ ನಡೆದಿದೆ ಎಂದು ಪರಿಶೀಲಿಸಿದಾಗ ತನ್ನ ಹೆಸರಲ್ಲಿಆರೋಪಿಗಳು ₹20 ಲಕ್ಷ ಸಾಲ ಪಡೆದಿದ್ದುಬೆಳಕಿಗೆ ಬಂದಿತ್ತು.
ಅದರಂತೆ ಬ್ಯಾಂಕ್ ಅಧ್ಯಕ್ಷರ ಸಹಿತ ಪಡುಬಿದ್ರಿ ಶಾಖೆಯ ಮೆನೇಜರ್ ಪ್ರಜ್ಞಾಶ್ರೀ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಪೂಜಾರಿ, ಸಿಬ್ಬಂದಿ ರೇಷ್ಮಾ, ಬ್ಯಾಂಕ್ ನಿರ್ದೇಶಕ ಮಿರ್ಜಾ ಅಹಮದ್, ಉಮನಾಥ್ ಜೆ. ಶೆಟ್ಟಿಗಾರ್, ಶೆರಿಲ್ ಲಿಯೋನಾ ಐಮನ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ 89/2026 03 BNS 316(2), 318(4), 336(2) ಜೊತೆಗೆ 3(5) ಹಾಗೂ SC-ST ದೌರ್ಜನ್ಯ ತಡೆ ಕಾಯ್ದೆ (POA Act) 3(1)(s) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.