
ನವದೆಹಲಿ: ದೇವಾಸ್‌ನ ಟೋಂಕ್ ಕಲಾನ್ ಪ್ರದೇಶದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಇಂದು(ಮೇ 15) ಬೆಳಿಗ್ಗೆ ಭಾರೀ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇತರ 25 ಮಂದಿ ಗಾಯಗೊಂಡಿದ್ದಾರೆ.

ಧೀರಜ್, ಸನ್ನಿ ಮತ್ತು ಸುಮಿತ್ ಮೃತ ಕಾರ್ಮಿಕರು. ಗಾಯಗೊಂಡವರಲ್ಲಿ 13 ಮಂದಿಯ ಸ್ಥಿತಿ ಗಂಭೀರವಾಗಿದೆ.

ಸ್ಫೋಟದ ಪರಿಣಾಮದಿಂದ ದೇಹದ ಭಾಗಗಳು 20-25 ಅಡಿ ದೂರದಲ್ಲಿ ಹಾರಿಬಿದ್ದಿವೆ. ಇದರಿಂದ ಅನೇಕ ಕಾರ್ಮಿಕರಿಗೆ ತೀವ್ರವಾದ ಸುಟ್ಟ ಗಾಯಗಳಾಗಿವೆ. ಪಟಾಕಿ ಕಾರ್ಖಾನೆಯಲ್ಲಿ 200ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ಸಮಯದಲ್ಲಿ 15-25 ಕಾರ್ಮಿಕರು ಘಟಕದೊಳಗೆ ಇದ್ದರು ಎನ್ನಲಾಗಿದೆ.
