ಸುರತ್ಕಲ್‌ನಲ್ಲಿ ರಾಜ್ಯ ಮಟ್ಟದ ಹಿರಿಯರ ಕ್ರಿಕೆಟ್ ಹಬ್ಬ ಪಂದ್ಯಾಟ

ಸುರತ್ಕಲ್ : ಸುರತ್ಕಲ್ ಸ್ಪೋಟ್ಸ್೯ ಕ್ಲಬ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ನಿರಂತರವಾಗಿ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಇತರ ಸಂಘಗಳಿಗೆ ಮಾದರಿಯಾಗಿದೆ ಎಂದು ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು ನುಡಿದರು.

ಅವರು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಮತ್ತು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಸುರತ್ಕಲ್ ಗೋವಿಂದದಾಸ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಎರಡು ದಿನದ ಹಿರಿಯರ ಕ್ರಿಕೆಟ್ ಹಬ್ಬ ಪಂದ್ಯಾಟ ಸೀಸನ್ 5 ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ಭರತ್ ವೈ ಶೆಟ್ಟಿ ಮಾತನಾಡಿ ಕ್ರೀಡೆಯಲ್ಲಿ ಒಮ್ಮೆ ತೊಡಗಿಕೊಂಡರೆ ಅದನ್ನು ಬಿಡಲು ಸಾಧ್ಯವಾಗುವುದಿಲ್ಲ ಎಂದರು. ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಮಾತನಾಡಿ ಕ್ರೀಡೆ ಮನಸ್ಸು ಮತ್ತು ದೇಹವನ್ನು ಹತೋಟಿಯಲ್ಲಿಡುವ ಕ್ರೀಡೆ. ಹೊರಂಗಣ ಮತ್ತು ಒಳಾಂಗಣ ಎಂಬ ಎರಡು ರೀತಿಯಲ್ಲಿ ಕ್ರೀಡೆ ಇದೆ.‌ ಕ್ರೀಡಾಳುಗಳಿಗೆ ಕ್ರೀಡಾ ಮನೋಭಾವಣೆ ಬೇಕು ಎಂದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಮಾತನಾಡಿ ಹಿರಿಯರ ಕ್ರೀಡಾ ಕೂಟದ ಜೊತೆಗೆ ಮಕ್ಕಳಲ್ಲೂ ಕ್ರೀಡಾ ಸ್ಪೂರ್ತಿಯನ್ನು ತುಂಬಿಸಿ ಎಳೆಯ ಮಕ್ಕಳಿಗೂ ಸಂಘಟಕರು ಕ್ರೀಡೆಯನ್ನು ಆಯೋಜಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ ಎಂದರು.

ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಸುರತ್ಕಲ್ ಚಾವಡಿ ಹಾಲ್ ಮಾಲಕರಾದ ಡಿ.ಕೆ.ಶೆಟ್ಟಿ ಸೂರಿಂಜೆ, ಕರಾಟೆ ಶಿಕ್ಷಕ ಈಶ್ವರ್ ಕಟೀಲು,ರಾಮ್ ಮೋಹನ್ ಎಣ್ಮಕಜೆ , ಸೇವಾ ಲೈಪ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಭರತ್ ರಾಜ್ ಕೃಷ್ಣಾಪುರ, ಉದ್ಯಮಿ ದಿಲೀಪ್ ಮುಂಚೂರು, ಕುಶಲ ಪೂಜಾರಿ ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಉಪಾಧ್ಯಕ್ಷ ನಾಗರಾಜ್ ಕಡಂಬೋಡಿ ಕಾರ್ಯದರ್ಶಿ ಕಿರಣ್ ಅಚಾರ್ಯ ಹೊಸಬೆಟ್ಟು ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ವಹಿಸಿದರು. ಕಿರಣ್ ಆಚಾರ್ಯ ಹೊಸಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ಕ್ರಿಕೆಟ್ ಪಂದ್ಯಾಕೂಟದಲ್ಲಿ ಪ್ರಥಮ ಸಾಯಿ ಅನಂದ ಬೆಂಗಳೂರು, ದ್ವೀತಿಯ ವೀರ ಕೇಸರಿ ತಡಂಬೈಲ್ ಪ್ರಶಸ್ತಿ ಗಳಿಸಿತು.

error: Content is protected !!